Oplus_0

ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಜಾತ್ರೆ ವಿಶೇಷ | ಅಲ್ಲೂರ.ಬಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮೇ.11 ರಿಂದ ಪ್ರಾರಂಭ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದ ಉದ್ಭವ ಮೂರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಿ ಹಾಗೂ ಶ್ರೀ ಕಟ್ಟಿ ಪರಮೇಶ್ವರಿ ದೇವಿ ಪುರಾತನ ಕಾಲದಿಂದ ಹೆಸರಗೊಂಡಿರುತ್ತದೆ. ಸಾಕ್ಷಾತ್‌ ಶ್ರೀ ದುರ್ಗಾ ಪರಮೇಶ್ವರಿ ದೇವಿ ಹಾಗೂ ಶ್ರೀ ಕಟ್ಟಿ ಪರಮೇಶ್ವರಿ ದೇವಿಯ ಜಾತ್ರೆಯು ಪ್ರತಿ ಮೂರು ವರ್ಷದ ಪದ್ದತಿಯಂತೆ ಈ ವರ್ಷವೂ ಕೂಡಾ ಬಹು ವಿಜೃಂಬಣೆಯಿಂದ ಜರುಗುವುದು.

ಮೇ.8 ರಂದು ಗೌಡರ ಮನೆಯಿಂದ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಬಸವಣ್ಣ ದೇವಸ್ಥಾನದಿಂದ ಸಕಲ ಮಂಗಲ ವಾದ್ಯಗಳೊಂದಿಗೆ ಮೆರವಣಿಗೆಯು ಶ್ರೀ ಕಟ್ಟಿ ಪರಮೇಶ್ವರಿ ದೇವಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನಕ್ಕೆ ತಲಪುವುದು. ತದನಂತರ ಕೊಡ ಕೂಡಿಸುವ ಪೂಜಾ ಕಾರ್ಯಕ್ರಮ ಜರುಗುವುದು.

ಮೇ. 11 ರಂದು ಸೋಮವಾರ ಸಾಯಂಕಾಲ 5 ಗಂಟೆಗೆ ತೆಲಿಪಟ್ಟರಾಯರ ಭವ್ಯ ಮೆರವಣಿಗೆಯು ಡೊಳ್ಳು, ಬಾಜೆ, ಭಜಂತ್ರಿ ಹಾಗೂ ಸಕಲ ಮಂಗಲ ವಾದ್ಯಗಳೊಂದಿಗೆ ಬಜಾರ ಕಟ್ಟೆಯಿಂದ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ಮಂದಿರಕ್ಕೆ ತಲುಪುವುದು.

12 ರಂದು ಮಂಗಳವಾರ ಬೆಳಗ್ಗೆ 6 ಗಂಟೆಗೆ ಮಹಾ ಅಭಿಷೇಕ ಹಾಗೂ ಶ್ರೀ ದೇವಿಯ ವಿಶೇಷ ಪೂಜಾ ಅರ್ಚನ ಮತ್ತು ವಿವಿಧ ಪೂಜಾ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನೆರವೇರುವುದು.

ಮೇ.13 ಬುಧವಾರ ರಂದು ಕೈಕುಸ್ತಿ ಕಾರ್ಯಕ್ರಮ ಕೈಕುಸ್ತಿ ಯಲ್ಲಿ 3 ಜನರನ್ನು ಗದ್ದವರಿಗೆ ಒಂದು ಟೆಂಗಿನ ಕಾಯಿ 4 ಜನರನ್ನು ಸೋಲಿಸಿದರೆ ಒಂದು ಬೆಳ್ಳಿಯ ಕಡಗ ಬಹುಮಾನ ನೀಡಲಾಗುವುದು ಹಾಗೂ ಸಂಪೂರ್ಣ 5 ಜನರನ್ನು ಸೋಲಿಸದರೆ 3 (ಮೂರು) ಮಾಸಿ ಬಂಗಾರ ಉಂಗುರ ಬಹುಮಾನ ಕೊಡಲಾಗುವುದು.

ಮೇ.14 ಗುರುವಾರ ದಂದು ಪಲ್ಲಿ ಚೆಲ್ಲುವ ಕಾರ್ಯಕ್ರಮ ಜರುಗುವುದು. ಜಾತ್ರೆಗೆ ಬಂದಂತಹ ಭಕ್ತಾಧಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ದುರ್ಗಾದೇವಿ ಹಾಗೂ ಶ್ರೀ ಕಟ್ಟಿದೇವಿ ಸೇವಾ ಸಂಘದವರು ತಿಳಿಸಿದ್ದಾರೆ.

ವಿಶೇಷ ಸೂಚನೆ : ಭಕ್ತಾದಿಗಳಿಗೆ ಅನುಕೂಲವಾಗುವಂತೆ ಯಾದಗಿರಿ, ಗುರುಮಿಟಕಲ್, ಸೇಡಂ, ಕಲಬುರಗಿ ಹಾಗೂ ಚಿತ್ತಾಪುರ ಡಿಪೋಗಳಿಂದ ವಿಶೇಷ ಬಸ್ಸಿನ ಸೌಕರ್ಯ ಇರುತ್ತದೆ.

Spread the love

Leave a Reply

Your email address will not be published. Required fields are marked *

You missed

error: Content is protected !!