Oplus_0

ಬಿಎಸ್’ವೈ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವಿಯಲ್ಲಿ ಕಾರಜೋಳ ಕಾರ್ಯ ನಿಜಕ್ಕೂ ‌ಶ್ಲಾಘನೀಯ: ದೀಪಕ್ ಹೊಸ್ಸೂರಕರ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಬಿ.ಎಸ್.ವೈ ಅಭಿಮಾನೋತ್ಸವ ಕಾರ್ಯಕ್ರಮದ ಮುಖ್ಯ ಕಾರಣಿಕರ್ತರಾಗಿರುವ ಸಂಸದ ಗೋವಿಂದ ಕಾರಜೋಳ ಮತ್ತು ಅವರ ಸುಪುತ್ರ ಯುವ ನಾಯಕ ಉಮೇಶ್ ಕಾರಜೋಳ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಚಿತ್ತಾಪುರ ನರಗ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಡಿ. ಹೊಸ್ಸೂರಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಯಡಿಯೂರಪ್ಪನವರು 50 ವರ್ಷಗಳ ಯಶಸ್ಸು ರಾಜಕೀಯ ಪರ್ವವನ್ನು ಪೂರೈಸಿದ ಹಿನ್ನೆಲೆ, ಅದನ್ನು ಕಾರ್ಯಗತ ಮಾಡಲು ಪಟ್ಟ ಶ್ರಮ ನಿಜಕ್ಕೂ ಪ್ರಸಂಶನೀಯ ಎಂದು ತಿಳಿಸಿದ್ದಾರೆ.

ಸಂಸದ ಗೋವಿಂದ ಕಾರಜೋಳ ಅವರು ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮ ಮಾಡಬೇಕೆಂಬ ವಿಚಾರವನ್ನು ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ಅವರ ಗಮನಕ್ಕೆ ತಂದು ಬಿಳಿಕ ಕೇಂದ್ರ ಸಚಿವ ಅಮೀತ್ ಶಾ ಅವರಿಗೆ ಎಲ್ಲಾ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಇರಲೇಬೇಕು ಎಂದು ಹೇಳಿ ಅವರನ್ನು ಒಪ್ಪಿಸಿ, ಕೇಂದ್ರ ಮತ್ತು ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಗೊಂಡು, ನಿರೀಕ್ಷೆಗೂ ಮೀರಿ ಜನರನ್ನು ಒಗ್ಗೂಡಿಸಿ, ಬಿಜೆಪಿ ಹಾಗೂ ಹಿಂದುತ್ವದ 2028ರ ಮುನ್ನಡಿ ಬರೆದವರು ಗೋವಿಂದ ಕಾರಜೋಳ ಎಂದು ಬಣ್ಣಿಸಿದ್ದಾರೆ.

ಕರ್ನಾಟಕ ಮಧ್ಯೆ ಭಾಗ ಕೋಟೆ ಚಿತ್ರದುರ್ಗದಲ್ಲಿ ಐತಿಹಾಸಿಕ ಕಾರ್ಯಕ್ರಮ ಮಾಡಿರುವುದು ವೇದಿಕೆಯ ಮೇಲೆ ಜಗದ್ಗುರುಗಳು, ಮಠಾಧಿಶರು ವಿವಿಧ ಪೂಜ್ಯರನ್ನು ಆಹ್ವಾನಿಸಿ, ಐತಿಹಾಸಿಕ ಯಡಿಯೂರಪ್ಪ ನವರ ಅಭಿಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು‌.

ತಂದೆಗೆ ತಕ್ಕ‌ ಮಗ: ಉಮೇಶ್ ಕಾರಜೋಳ

ಸಂಸದ ಗೋವಿಂದ ಕಾರಜೋಳ ಅವರ ಸುಪುತ್ರ ಉಮೇಶ್ ಕಾರಜೋಳ ಅವರು ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಹಗಲಿರುಳು ಶ್ರಮ ಪಟ್ಟು ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು ಎಂದು ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ

Spread the love

Leave a Reply

Your email address will not be published. Required fields are marked *

error: Content is protected !!