ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಮೆಸನ್ ಕಿಟ್ ವಿತರಣೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆಗೆ ಸಂಯೋಜಿತ, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ  ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಮೆಸನ್ ಕಿಟ್ ವಿತರಣೆ ಮಾಡಲಾಯಿತು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕರ್ನಾಟಕ ಸರ್ಕಾರ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಹಾಗೂ ಟೂಲ್ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಗಿತ್ತು ಅದರ ಪೂರಕವಾಗಿ ಇಂದು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಟ್ಟಡ ಕೆಲಸ ಮಾಡುವ ಸುಮಾರು ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು.

ಕಾರ್ಮಿಕ ನಿರೀಕ್ಷಕ ವಿಕ್ರಂ ಬಡಿಗೇರ್, ಗ್ರೇಡ್ 2 ತಹಸೀಲ್ದಾರ್ ಅಣ್ಣರಾಯ ಹಾಗೂ ಎಐಟಿಯುಸಿ ಕಾರ್ಮಿಕ ಸಂಘದ ಕಲಬುರಗಿ ಜಿಲ್ಲಾ ಜಂಟಿ ಕಾರ್ಯಧರ್ಶಿ ಶರಣು ಹೇರೂರ್, ಕಟ್ಟಡ ಕಾರ್ಮಿಕ ಸಂಘದ ವಾಡಿ ಸ್ಥಳೀಯ ಕಾರ್ಯಧರ್ಶಿ ಚಂದ್ರಕಾಂತ್ ಪಾಗ್ಲಾಪುರ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.

ಕಟ್ಟಡ ಕಾರ್ಮಿಕರಾದ ಶ್ರೀಶೈಲ್ ಕಡಬುರ್, ಶ್ರೀರಾಮ್ ರಾಠೋಡ್, ಭೀಮರಾಯ ಕಡಬುರ್, ಮಹಾಂತೇಶ್ ಮಲಗತ್ತಿ, ಅಬ್ರಾಮ್ ರಾಜ್ಯೋಳ್ಳಿ, ನಿರ್ಮಲ ಮುಂಡರ್ಗಿ, ಬಸಲಿಂಗಪ್ಪ ಮುಂಡರಗಿ, ಚನ್ನಮ್ಮ್, ಸುಮಿತ್ರ ಧನ್ನೆಕರ್, ಕಾಳಮ್ಮ, ರೇಣುಕಾ, ತಿಪಣ್ಣ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!