Oplus_0

ಚಿತ್ತಾಪುರ ಪಟ್ಟಣದ ಪ್ರತಿ ಮನೆಗೂ ನೀರು ಪೂರೈಕೆ ಮಾಡುವುದು ಸಚಿವರ ಗುರಿಯಿದೆ: ಜಗದೀಶ್ ಚವ್ಹಾಣ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಪ್ರತಿ ಮನೆಗೂ ನೀರು ಪೂರೈಕೆ ಮಾಡುವುದು ಸಚಿವ ಪ್ರಿಯಾಂಕ್ ಖರ್ಗೆ ಅವರ ಗುರಿಯಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ ಹೇಳಿದರು.

ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸುಧಾರಿತ ಕುಡಿಯುವ ನೀರು ಸರಬರಾಜು ಅಮೃತ್ ಜಲ್ 2.0 ಯೋಜನೆ ಅಡಿಯಲ್ಲಿ ಈಚೇಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾಮಗಾರಿಗೆ ಗುರುವಾರ ತಾಂಡಾದ ಹಿರಿಯರಾದ ಪೋಮು ಪಾಂಡು ಚವ್ಹಾಣ, ಯಶೋಧ ಗೋವಿಂದ ನಾಯಕ್ ಅವರು ಭೂಮಿ ಪೂಜೆ ನೆರವೇರಿಸಿದರು.

ಸುಮಾರು 45 ಕೋಟಿ ವೆಚ್ಚದಲ್ಲಿ ಪಟ್ಟಣದ ಪ್ರತಿಯೊಂದು ವಾರ್ಡಿನಲ್ಲಿ ಮನೆಗೂ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಒಂದು ನಳ ಕೊಡುವ  ಗುರಿಯನ್ನು ಸಚಿವರು ಹೊಂದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಿಶನ್ ನಾಯಕ, ಪೋಮು ಚವ್ಹಾಣ, ದೇವಿದಾಸ್ ನಾಯಕ, ಭೀಮಸಿಂಗ್ ಚವ್ಹಾಣ, ಪೋಮು ಚವ್ಹಾಣ, ಠಾಕ್ರು ಪವಾರ, ದೇವಿದಾಸ್ ಚವ್ಹಾಣ, ತಾರಾನಾಥ್ ಚವ್ಹಾಣ, ರಾಮು ರಾಠೋಡ, ಅಂಬಾದಾಸ್ ಚವ್ಹಾಣ, ಮಹೇಶ್ ಪವಾರ, ಅನಿಲ್ ಚವ್ಹಾಣ, ಈಶ್ವರ್ ರಾಥೋಡ, ದತ್ತು ಪವಾರ, ಜಗದೀಶ್ ಪವಾರ, ಸಂತೋಷ್ ಚವ್ಹಾಣ, ಸಂತೋಷ್ ರಾಥೋಡ, ಸುನಿಲ್ ಪವಾರ, ರಾಮ ರಾಠೋಡ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!