ಅಖಿಲ ಭಾರತೀಯ ಕೋಲಿ ಸಮಾಜದ ಕಾಳಗಿ ತಾಲೂಕು ಅಧ್ಯಕ್ಷರಾಗಿ ಸಂತೋಷ ಕಡಬೂರ ನೇಮಕ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಅಖಿಲ ಭಾರತೀಯ ಕೋಲಿ ಸಮಾಜದ ಕಾಳಗಿ ತಾಲೂಕು ಅಧ್ಯಕ್ಷರನ್ನಾಗಿ ಸಂತೋಷ ಕಡಬೂರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಕಶಪ್ ರವರ ನಿರ್ದೇಶನ ಹಾಗೂ ನನ್ನ ದತ್ತವಾದ ಅಧಿಕಾರದ ಮೇರೆಗೆ, ತಾವು ಸಮಾಜದ ಮೇಲೆ ಇಟ್ಟಿರುವ ಸಮರ್ಪಣಾ ಭಾವನೆ, ಸೇವಾ ಮನೋಭಾವ ಮತ್ತು ಸಂಘಟನಾತ್ಮಾಕ ರುಚಿ ಪರಿಗಣಿಸಿ ತಮ್ಮನ್ನು ಮುಂದಿನ ಆದೇಶದ ಮೇರೆಗೆ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ತಾವು ಅಖಿಲ ಭಾರತೀಯ ಕೋಲಿ ಸಮಾಜ (ರಿ) ನವದೇಹಲಿಯ ಸಂವಿಧಾನದ ಪ್ರಕಾರ, ಸಂಘ ಹಾಗೂ ಸಮಾಜದ ಹಿತಕ್ಕಾಗಿ, ಪ್ರಾಮಾಣಿಕವಾಗಿ, ಭಕ್ತಿ, ನಿಷ್ಟೆ ಹಾಗೂ ವಿನಯತೆಯಿಂದ, ಸಮಾಜದ ಮತ್ತು ಸಂಘದ ಘನತೆ ಗೌರವಗಳಿಗೆ ದಕ್ಕೆ ತರದಂತೆ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪದಾಧಿಕಾರಿಗಳ ಆದೇಶಗಳನ್ನು ಗೌರವಯುತವಾಗಿ ಪಾಲಿಸುತ್ತಾ, ಕೆಳ ಹಂತದ ಪದಾಧಿಕಾರಿಗಳಿಗೆ ಅಂತೆಯೇ ಮಾರ್ಗದರ್ಶನ ಮಾಡುತ್ತ, ಯಾವುದೇ ಗೌರವ ಧನ ಅಥವಾ ಸಂಭಾವನೆ ಇಲ್ಲದೆ ತನ್ನು, ಮನ, ಧನ ದಿಂದ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

