ರಟಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ ನಿಮಿತ್ತ ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ರಟಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮವನ್ನು ರೇವಣಸಿದ್ಧ ಶಿವಾಚಾರ್ಯರು, ರಟಕಲ್ ದೊಡ್ಡ ಮಠದ ಶ್ರೀ ನೀಲಕಂಠ ದೇವರು ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ಮಾತನಾಡಿ, ದಾನಮ್ಮ ದೇವಿಯ ಪುರಾಣ ಕೇಳಿ ಜೀವನದಲ್ಲಿ ಒಳ್ಳೆಯ ವಿಚಾರಗಳು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವದು ತಂದೆ ತಾಯಿಯರ ಕರ್ತವ್ಯ ಎಂದು ಕಿವಿಮಾತು ಹೇಳಿದರು. ಸೋಮವಾರದಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ, ಜ.14 ರಂದು ಸಾಯಂಕಾಲ 5 ಗಂಟೆಗೆ ಧರ್ಮ ಸಭೆ ಜರುಗುವುದು ಎಂದರು.
ರೈತ ಮುಖಂಡ ವೀರಣ್ಣ ಗಂಗಾಣಿ ಮಾತನಾಡಿ, ಅಂಬಿಗರ ಚೌಡಯ್ಯನವರ 906ನೇ ಜಯಂತಿ ಉತ್ಸವ ರಟಕಲ್ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪೂಜ್ಯ ರೇವಣಸಿದ್ದ ಶರಣರಿಗೆ ಸಮಾಜದ ಮುಖಂಡರಿಗೆ ಧನ್ಯವಾದಗಳು ಹೇಳಿದರು.
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರಿ ಅಂಬಿಗನ ನಂಬಿದರೆ ಒಂದೇ ಹುಟ್ಟಲ್ಲಿ ಕಡೆಗಹಾಯಿಸುವ ನಮ್ಮ ನಿಜಶರಣ ಅಂಬಿಗರ ಚೌಡಯ್ಯ ಎಂಬ ವಚನ ಹೇಳಿದರು. ಕಾಳಗಿ ಗ್ರಾಪಂ ಮಾಜಿ ಶಿವಶರಣಪ್ಪ ಗುತ್ತೇದಾರ, ಪ್ರವಚನಕಾರ ಶಾಮರಾವ ಕಡಬೂರು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ನಾರಂಜಿ ಕಂದಗೂಳ, ಶರಣಮ್ಮ ಅರಣಕಲ, ಸಂಗೀತಾ ಕಿಣ್ಣಿ, ನೀಲಕಂಠ ಕೊಡದೂರ, ಪ್ರಕಾಶ ಹುಳಗೇರಾ, ಬಸವರಾಜ ತಳವಾರ, ಮಲ್ಲು ಮರುಗುತ್ತಿ ರಟಕಲ್, ಮಲ್ಲು ಚಿಕ್ಕಅಗಸಿ ಹಾಗೂ ಗ್ರಾಮದ ಮುಖಂಡರು, ತಾಯಂದಿರು ಇದ್ದರು. ಪುರಾಣಿಕರಾದ ಶಂಭುಲಿಂಗಯ್ಯ ಶಾಸ್ತ್ರಿ ಹಿರೇಮಠ ರಟಕಲ್, ಸಂಗೀತ ಸೇವೆ ರಾಜು ಬಂಯರ, ತಬಲಾ ಸೇವೆ ರಾಜ್‌ಕುಮಾರ ಮಾಲಸಾಪುರ ಸಲ್ಲಿಸಿದರು.
