ಮಾಲಗತ್ತಿ ಶ್ರೀಗಳ ನಾಳೆ ಅಭಿನಂದನಾ ಸಮಾರಂಭ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದ ಪೂಜ್ಯ ಶ್ರೀ ಚನ್ನಬಸವ ಶರಣರಿಗೆ ಅಮೇರಿಕಾ ವೀಸಡಮ್ ಪಿಸ್ ಯುನಿವರ್ಸಿಟಿಯ, ಆಮೇರಿಕಾ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಪ್ರಯುಕ್ತ ಗ್ರಾಮದಲ್ಲಿ ಗ್ರಾಮಸ್ಥರ ವತಿಯಿಂದ ಏ.20 ರಂದು ರಾತ್ರಿ 6.30 ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ ಮುಗುಳನಾಗಾಂವ, ಮಲ್ಲಿಕಾರ್ಜುನ ಇಟಗಿ ಅವರು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಅನೇಕ ಮಠಾಧೀಶರು, ಶಾಸಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

