Oplus_0

ಪ್ರಜಾ ಸೌಧದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ | ಭಗೀರಥ ಜಯಂತಿ ಸರಳವಾಗಿ ಆಚರಣೆಗೆ ನಿರ್ಧಾರ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಶ್ರೀ ಭಗೀರಥ ಜಯಂತಿಯನ್ನು ಸಮಾಜದ ಮುಖಂಡರ ಅಭಿಪ್ರಾಯದ ಮೇರೆಗೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪ್ರಜಾ ಸೌಧದ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಭಗೀರಥ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏ.23 ರಂದು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಶ್ರೀ ಭಗೀರಥ ಫೋಟೋ ಪೂಜೆ ನೆರವೇರಿಸಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರಗಳಲ್ಲಿ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಪೋಟೋ ಪೂಜೆ ನೆರವೇರಿಸಬೇಕು ಎಂದು ಆಯಾ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ್ಪಾರ ಗುರುಪೀಠದ ಜಗದ್ಗುರು ಶ್ರೀ ಭಗೀರಥಾನಂದ ಮಹಾಸ್ವಾಮಿಗಳು, ಟಿಪಿಓ ಶಿವಶರಣಪ್ಪ ಮಂಠಾಳೆ, ಸಣ್ಣ ನೀರಾವರಿ ಇಲಾಖೆಯ ಮಲ್ಲಿಕಾರ್ಜುನ ಮಾಲಿ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ನರಸಿಂಹಲು, ಕೃಷಿ ಅಧೀಕ್ಷಕ ಆನಂದ ಕತಕನಳ್ಳಿ, ಡಾ.ಶಾಂತಯ್ಯ, ಜೆಸ್ಕಾಂ ಎಇಇ ಸೈಯದ್, ತೋಟಗಾರಿಕೆ ಅಧಿಕಾರಿ ರಾಜಕುಮಾರ್, ಪುರಸಭೆ ಅಧಿಕಾರಿ ಲೋಹಿತ್, ಶಾಹಿದ್ ಫೈಹಿಮುದ್ದಿನ್, ನಾಗರಾಜ ದೊಡ್ಡಮನಿ, ಪ್ರಕಾಶ್, ದೀಪಕ್ ಜೋಶಿ, ಶರಣಪ್ಪ ರಾಂಪೂರಹಳ್ಳಿ, ಪೀರಣ್ಣ ನಾಯ್ಕೋಡಿ, ಶ್ರೀನಿವಾಸ ಹಳ್ಳಿ, ವಸಂತಕುಮಾರ್ ಚೂರಿ, ಲಕ್ಷ್ಮಣ್, ಬಸಂತ್, ಎಂ.ಡಿ ಜಾವೀದ್, ರಮೇಶ್ ಬಿಸಿಎಂ, ಬಸವರಾಜ ರಾವೂರ, ಭೀಮು ರಾವೂರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!