Oplus_0

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ | ಮಣಿಕಂಠ ರಾಠೋಡ ವಿರುದ್ಧ ಮಲ್ಲಿಕಾರ್ಜುನ ಕಾಳಗಿ ದೂರು, ಪ್ರಕರಣ ದಾಖಲು

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರಿಂದ ಜು.11 ರಂದು ಪ್ರಕರಣ ದಾಖಲಾಗಿದೆ.

ತಾಲೂಕಿನ ದಂಡೋತಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಜು.9 ರಂದು ರಾತ್ರಿ ಊಟದಲ್ಲಿ ಏನೋ ಏರು ಪೇರು ಆಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ವಿಷಯಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಆ ವಿಡಿಯೋದಲ್ಲಿ, ಕೆಲಸಕ್ಕೆ ಬರಲಾರದ ಹೋಂ ಮಿನಿಸ್ಟರ್ ಕರ್ನಾಟಕ ಪಿಕೆ ಎಲ್ಲಿದ್ದೋ ನಿನ್ನ ಕ್ಷೇತ್ರದಲ್ಲಿ ಇವತ್ತು ದಂಡೋತಿದಾಗ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 50 ರಿಂದ 60 ಹುಡುಗರು ಫುಡ್ ಪಾಯಿಸನ್ ಆಗಿ ಸಾವು ಬದುಕಿನಲ್ಲಿದ್ದಾರೆ ನೆನಪು ಆದ ನಿನಗೆ, ಏನ್ ಆರಾಮಾಗಿ ಮನೆಯಲ್ಲಿ ಮಲಗಿಕೊಂಡಿದ್ದೇನು, ಕೇವಲ ನಿನಗ ಆರ್ ಎಸ್ ಎಸ್ ಗೆ ಬೈಯೋದು ಗೊತ್ತು ಇಲ್ಲಿ ನೋಡು ಎಂದು ಟ್ಯಾಬ್ ನಲ್ಲಿ ವಿಡಿಯೋ ತೋರಿಸುತ್ತಾ ಇಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಅವರ ಮೇಲೆ ನಿನ್ನ ನಿಗಾ ಇಲ್ಲ. ನೀನು ನೋಡಿದರೆ ಬೆಳಗ್ಗೆಯಿಂದ ಸಾಯಂಕಾಲದ ತನಕ ಆರ್ ಎಸ್ ಎಸ್ ಬಯೋದು Useless Fellow, Nonsense Fellow ಕ್ಷೇತ್ರದಾಗ ನೋಡು ಏನಾಗಿದೆ ನಮ್ಮಂತವರು ಜನರ ಮಧ್ಯೆ ಇದ್ರ ನಮ್ಮ ಮೇಲೆ ಕೇಸ್ ಮಾಡ್ತಿ ಅದೇ ಚಿತ್ತಾಪುರ ಹಾಸ್ಪಿಟಲ್ ನಲ್ಲಿ ಒಂದು ಅಂಬುಲೆನ್ಸ್ ಇಲ್ಲ, ವ್ಯವಸ್ಥೆ ಸರಿ ಇಲ್ಲ ಹಾಸ್ಪಿಟಲ್ ಗೆ ನಾನು ಒಂದು ಬಾರಿ ಕೇಳಲು ಹೋದರೆ ಕೇಸ್ ಹಾಕಿಸಲಿಕ್ಕೆ ಹಚ್ಚಿತಿ.

ನಿನ್ನ Followers ಹುಚ್ಚರು 50-60 ವರ್ಷ ನಿಮ್ಮ ಗುಲಾಮಗಿರಿ ಮಾಡಿ ಮಾಡಿ ಹುಚ್ಚರು ಅವರಿಗೆ ಸರಿಯಾಗಿ ಬುದ್ಧಿ ಇಲ್ಲ. ಸರಿಯಾಗಿ ಸ್ಕೂಲಿಲ್ಲ ಸರಿಯಾಗಿ ಹಾಸ್ಟೆಲ್ ಇಲ್ಲ ಸರಿಯಾಗಿ ವ್ಯವಸ್ಥೆ ಇಲ್ಲ ಅದರ ಬಗ್ಗೆ ಮಾತನಾಡಲಿಕ್ಕೆ ಆಗಲ್ಲ, ಈ ಹುಚ್ಚರು ನಿನ್ನ Followers ಆಗಿ RSS ಗೆ ಬೈಯುತ್ತಿದ್ದಾರೆ. ಇನ್ನು ಎಷ್ಟು ಜನರಿಗೆ ಮೋಸ ಮಾಡುತ್ತೀರಿ, ಕಲ್ಯಾಣ ಕರ್ನಾಟಕ ಜನರಿಗೆ ಇನ್ನು ಎಷ್ಟು ಅಂತ ತುಳಿತೀರಿ. ಕೇವಲ ಆರ್ ಎಸ್ ಎಸ್ ಗೆ ಮಾತನಾಡಲಿಕ್ಕೆ ಮಾತ್ರ ರೋಡ್ಗೆ ಇಳಿಬ್ಯಾಡೋ ಹುಚ್ಚರೇ ಜನರ ಸಮಸ್ಯೆ ಏನದ ಎಂದು ತಿಳ್ಕೋರಿ ಅಮೇಲೆ ನಿಮ್ಮ PK ಗೆ followers ಆಗಿರಿ ಎಂದು ಸಾರ್ವಜನಿಕರಿಗೆ ಪ್ರಚೋದನಾಕಾರಿಯಾಗುವ ರೀತಿಯಲ್ಲಿ ಮಾತನಾಡಿರುತ್ತಾರೆ.

ಮಣಿಕಂಠ ರಾಠೋಡ ವಿನಾಕಾರಣ ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಅಂಬ್ಯೂಲೆನ್ಸ್ ವ್ಯವಸ್ಥೆ ಇಲ್ಲ ದಂಡೋತಿಗಾಗ 50-60 ಜನ ಹುಡಗರು ಸತ್ತಾರೆ, ಜನರಿಗೆ ಯಾಕೆ ಸಾಯಿಸ್ತಿಯೋ ಹುಚ್ಚಾ ಅಂತಾ ಹೇಳಿದ್ದು, ಆಸ್ಪತ್ರೆಯಲ್ಲಿ ಕೇವಲ 3-4 ಜನ ವಿದ್ಯಾರ್ಥಿಗಳು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡಿದ್ದು ಇನ್ನುಳಿದ ವಿದ್ಯಾರ್ಥಿಗಳು ತಮಗೇ ಏನಾದರೂ ತೊಂದರೆ ಆಗಬಹುದು ಅಂತಾ ಭಯಗೊಂಡು ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು, ಅಲ್ಲದೇ ನಮ್ಮ ನಾಯಕರಾದ ಪ್ರಿಯಾಂಕ ಖರ್ಗೆ ರವರಿಗೆ useless fellow, non sense fellow ಅಂತಾ ಅವಾಚ್ಯವಾಗಿ ಬೈದಿರುತ್ತಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಆಧಾರವಿಲ್ಲದೇ ತನ್ನ ವೈಯಕ್ತಿಕ ದ್ವೇಷದಿಂದ ಆವಾಚ್ಯವಾಗಿ ಬೈದು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ಪ್ರಚೋದನಾಕಾರಿಯಾಗುವ ರೀತಿಯಲ್ಲಿ ಮಾತನಾಡಿ ಶಾಂತಿ ಕದಡುವಂತೆ ಮಾತನಾಡಿ ಇನಸ್ಟ್ರಾಗ್ರಾಮ್ ಐ.ಡಿ ಆದ “ManikantaRathodbjp” ಮೂಲಕ ವಿಡಿಯೋ ಹರಿಬಿಟ್ಟಿದ್ದರಿಂದ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಲ್ಲಿಕಾರ್ಜುನ ಕಾಳಗಿ ದೂರು ನೀಡಿದ್ದಾರೆ.

ಈ ಅರ್ಜಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆ ಎನ್.ಸಿ ನಂಬರ 12/2026 ನೇದ್ದನ್ನು ದಾಖಲಿಸಿ ನಂತರ ಕಲಂ 352, 351(2) BNS 2023 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು, ಚಿತ್ತಾಪುರ ಪೊಲೀಸ್ ಠಾಣೆ ಗುನ್ನೆ ನಂ.106/2026 ಕಲಂ 352,353(1)(b) BNS-2023 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!