Oplus_0

ಚಿತ್ತಾಪುರ ತಾಲೂಕಿನಲ್ಲಿ ಮೇವಿನ ಅಭಾವ ನೀಗಿಸಲು ಪಶು ಪಾಲನಾ ಇಲಾಖೆಯಿಂದ ಸರ್ವ ಸಿದ್ಧತೆ: ಡಾ.ಕಣ್ಣಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನಲ್ಲಿ ಒಟ್ಟು 29712 ದನ, 2479 ಎಮ್ಮೆ, 10734 ಕುರಿ ಮತ್ತು 50629 ಮೇಕೆಗಳು ಸಾಕಾಣಿಕೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ನೀಗಸಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಕೈಗೋಳ್ಳಲಾಗುತ್ತಿದೆ ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ ತಿಳಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶು ಪಾಲನಾ ಇಲಾಖೆ ವತಿಯಿಂದ ಹೈಟೀಡ್ ಸೋರ್ಗಂ 1039 ಮತ್ತು ಸೌತ ಆಪ್ರಕಾನ್ ಟಾಲ್ ಮೇಕ್ಕೆಜೋಳ 567 ಮೇವಿನ ಬೀಜದ ಕಿರುಪೋಟ್ಟಣಗಳು (ಒಟ್ಟು 1606 ಕಿರು ಪೊಟ್ಟಣ) ಸರಬರಾಜು ಆಗಿರುತ್ತವೆ. ಈಗಾಗಲೆ ತಾಲೂಕಿನ 19 ಪಶು ಪಾಲನಾ ಇಲಾಖೆ ಸಂಸ್ಥೆಗಳ ವತಿಯಿಂದ ಗ್ರಾಮ ಪಂಚಾಯಾತವಾರು ಆಸಕ್ತಿಯಳ್ಳ ನೀರಾವರಿ ಜಮೀನು ಹೊಂದಿರುವ 504 ರೈತರಿಗೆ ಒಟ್ಟು 1435 ಮೇವಿನ ಕಿರುಪೋಟ್ಟಣಗಳು ಉಚಿತವಾಗಿ ನೀಡಲಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಮೇವು ಬೇಳೆಯಲು ಒಟ್ಟು 4 ಮೇವಿನ ಕೀರುಪೊಟ್ಟಣಗಳು ಬೇಕಾಗುತ್ತದೆ. ಮತ್ತು ಅಂದಾಜು ಒಂದು ಹೆಕ್ಟರ ಪ್ರದೇಶದಲ್ಲಿ ಉತ್ತಮವಾಗಿ ಬೇಳೆದಿದ್ದಲ್ಲಿ 30-35 ಟನ್ ಹಸಿ ಮೇವು ಬೇಳೆಯಬಹುದು ಎಂದು ತಿಳಿಸಿದ್ದಾರೆ.

ರೈತಬಾಂದವರು ಈಗಾಗಲೆ ಪಡೆದಿರುವ ಮೇವಿನ ಕಿರುಪೊಟ್ಟಣಗಳು ತಮ್ಮ ಸ್ವಂತ ಜಮೀನಿನಲ್ಲಿ ಬಿತ್ತನೆ ಮಾಡಿರುತ್ತಾರೆ ಮತ್ತು ಬಹಳಷ್ಟು ಕಡೆ ಉತ್ತಮವಾಗಿ ಫಸಲು ಬಂದಿರುತ್ತವೆ. ರೈತರ ಜಮೀನಿಗೆ ಖುದ್ದು ಬೇಟಿ ನೀಡಿ ಬೆಳೆದ ಬೇಳೆಗಳನ್ನು ಪರೀಶಿಲಿಸಲಾಗಿ, ಅಳ್ಳೋಳ್ಳಿ ಗ್ರಾಮದಲ್ಲಿ ಸ್ವಲ್ಪ ಪ್ರಮಣದಲ್ಲಿ ಕೀಟ ಬಾಧೆ ಕಂಡುಬಂದಿತ್ತದೆ. ರೈತರು ಕಿಟನಾಷಕ ಸಿಂಪಡಿಸಿ ಹತೋಟಿಗೆ ತಂದಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಜಾನುವಾರುಗಳಿಗೆ ತೀವ್ರ ಮೇವಿನ ತೊಂದರೆ ಉಂಟಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೇವಿನ ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಮತ್ತು ಹೋಬಳಿ ಮಟ್ಟದಲ್ಲಿ ಜಾನುವಾರು ಶಿಬಿರಕ್ಕಾಗಿ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆಯಲ್ಲಿ ಎಲ್ಲ ರೀತಿಯಲ್ಲಿ ಔಷದ ಮತ್ತು ಲಸಿಕೆಗಳು ಅಭ್ಯವಿದ್ದು, ಜಾನುವಾರು ಆರೋಗ್ಯ ಶಿಬಿರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!