ಕೋಲಿ ಸಮಾಜದ ಸಂಘಟನೆಗೆ ಶ್ರಮಿಸುತ್ತಿದ್ದ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ವಿರುದ್ಧ ಭೀಮಣ್ಣ ಸಾಲಿ ಟೀಕೆ ಟಿಪ್ಪಣಿ ಮಾಡುವುದನ್ನು ನಿಲ್ಲಿಸಲಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ ಅವರಿಗೆ ಯಾವುದೇ ಕೆಲಸ ಇಲ್ಲ ಹೀಗಾಗಿ ಕೆಲ ಮುಖಂಡರಿಗೆ ಹಾಗೂ ಏನು ಅರಿಯದ ಯುವಕರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡು ಸಮಾಜದಲ್ಲಿ ಬಿರುಕು ಮೂಡಿಸಿ ಎರಡು ಬಣಗಳಾಗಿ ಸೃಷ್ಟಿಸಿ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ ಇಷ್ಟು ಅಲ್ಲದೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕನೂರ ವಿರುದ್ಧ ಕೆಲವರಿಂದ ಸುಖಾ ಸುಮ್ಮನೆ ಹೇಳಿಕೆ ಕೊಡಿಸುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಇದು ಹಿರಿಯರಿಗೆ ಶೋಭೆ ತರುವುದಿಲ್ಲ ಎಂದು ಕೋಲಿ ಸಮಾಜದ ತಾಲೂಕು ಕಾರ್ಯದರ್ಶಿ ಶರಣು ಅರಣಕಲ್ ಭಾಗೋಡಿ ತಿಳಿಸಿದ್ದಾರೆ.
ಭೀಮಣ್ಣ ಸಾಲಿ ಅವರೇ ನಿಮ್ಮ ಸುತ್ತ ಮುತ್ತ ಚಾಡಿ ಚುಗುಲಿ ಮತ್ತು ಬೆಂಕಿ ಹಚ್ಚುವವರೇ ಇದ್ದಾರೆ ಸ್ವಲ್ಪ ಅಂತವರಿಂದ ಎಚ್ಚರವಹಿಸಿ ಇಲ್ಲದಿದ್ದರೆ ಇಷ್ಟು ದಿನ ಕಾಪಾಡಿಕೊಂಡು ಬಂದ ನಿಮ್ಮ ಗೌರವ ಮಣ್ಣುಪಾಲು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ಶಿವುಕುಮಾರ ಯಾಗಾಪೂರ ಅವರು ನಿಯಮಾನುಸಾರ ಜನರ ಸಹಮತದಿಂದ ಅಧಿಕೃತ ಚಿತ್ತಾಪುರ ಕೋಲಿ ಸಮಾಜದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿ ಕಡಿಮೆ ಸಮಯದಲ್ಲಿ ಸಮಾಜವನ್ನು ಸಂಘಟಿಸಿ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ಮಾಡಿದ್ದಾರೆ ಇದು ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹೀಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.
ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ವಿಫಲಗೊಳಿಸಲು ಮತ್ತು ಫೇಲ್ ಮಾಡಲು ಭೀಮಣ್ಣ ಸಾಲಿ ಮತ್ತು ಅವರ ಗುಂಪು ಏನೆಲ್ಲಾ ಪ್ರಯತ್ನ ಮಾಡಿದರು ಹಾಗೂ ಶುಭ ಕೋರುವ ಬ್ಯಾನರ್ ಯಾರೋ ಕಿಡಿಗೇಡಿಗಳು ಹರಿದ ವಿಷಯ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿ ಸಮಾಜದ ದಿಕ್ಕು ಬೇರೆಡೆ ಎಳೆಯುವ ಪ್ರಯತ್ನ ಮಾಡಿದರು ಅಷ್ಟೇ ಅಲ್ಲ ಈ ಬ್ಯಾನರ್ ನಮ್ಮವರೇ ಹರಿದಿದ್ದಾರೆ ಎಂದು ಬಸವರಾಜ ಚಿನ್ನಮಳ್ಳಿ ಮತ್ತು ಹಣಮಂತ ಸಂಕನೂರ ಅವರು ಆಧಾರರಹಿತ ಪ್ರಚೋದನಕಾರಿ ಹೇಳಿಕೆ ನೀಡಿ ಚಿತ್ತಾಪುರದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿದ್ದರು ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸ್ ಅಧಿಕಾರಿಗಳು ಕೇವಲ ಐದಾರು ಗಂಟೆಯಲ್ಲೇ ಕಿಡಿಗೇಡಿ ಪತ್ತೆ ಹಚ್ಚಿ ಸಮಾಜದಲ್ಲಿದ್ದ ಗೊಂದಲ ಮತ್ತು ಅನುಮಾನ ನಿವಾರಿಸಿದರು. ಇವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಕೋಲಿ ಸಮಾಜದಲ್ಲಿ ಎರಡು ಬಣಗಳು ಸೃಷ್ಟಿ ಮಾಡಿದ ಭೀಮಣ್ಣ ಸಾಲಿ ಅವರ ಎಡಬಿಡಂಗಿ ನವರಂಗಿ ಆಟ ಇಡೀ ಜಿಲ್ಲೆಗೆ ಹಾಗೂ ಚಿತ್ತಾಪುರ ತಾಲೂಕಿನ ಜನತೆಗೆ ಗೊತ್ತಾಗಿದೆ. ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರು ಮೊದಲಿಂದಲೂ ಕೋಲಿ ಸಮಾಜದ ಗಟ್ಟಿ ಧ್ವನಿಯಾಗಿದ್ದಾರೆ ತಮ್ಮ ಹೋರಾಟದ ಮನೋಭಾವದಿಂದಲೇ ತಮ್ಮನ್ನು ತಾವು ತೊಡಗಿಸಿಕೊಂಡು ಇಂದು ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಇವರಲ್ಲಿ ಕೋಲಿ ಸಮಾಜವನ್ನು ಸಂಘಟಿಸುವ ಗುಣಧರ್ಮವಿದೆ ಆದರೆ ಭೀಮಣ್ಣ ಸಾಲಿ ಅವರಲ್ಲಿ ಸಂಘಟಿಸುವ ಗುಣವಿಲ್ಲ ಒಡಕು ಮೂಡಿಸುವ ದುರ್ಗುಣವಿದೆ. ಈಗಲಾದರೂ ದ್ವೇಷದ ಭಾವನೆ ಬಿಟ್ಟು ಸಮಾಜದ ಪರವಾಗಿ ಕೆಲಸ ಮಾಡುವವರಿಗೆ ಬೆಂಬಲಿಸಿ ಕೈಜೋಡಿಸಿ ಎಂದು ತಿಳಿಸಿದ್ದಾರೆ.