Oplus_0

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಪ್ರಾರಂಭ, ಅ.7 ರಂದು ಪಲ್ಲಕ್ಕಿ ಉತ್ಸವ ಜಾತ್ರೋತ್ಸವ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೇಶದ ಮುಖ್ಯ ಶಕ್ತಿ ಪೀಠಗಳಲ್ಲೊಂದಾದ, ರಾಷ್ಟ್ರಕೂಟ ಸಾಮ್ರಾಜ್ಯದ ಕುಲದೇವತೆಯಾಗಿ ಮತ್ತು ನಮ್ಮ ಕನ್ನಡ ನಾಡಿನ ಇತಿಹಾಸ ಪ್ರಸಿದ್ದ ವಿಶ್ವವಿದ್ಯಾಲಯವಾಗಿ ಮತ್ತು ಘಟಿಕಸ್ಥಳವಾಗಿ ನಾಗಾವಿಯ ಇಷ್ಟದೇವತೆಯಾಗಿದ್ದ, ಶ್ರೀ ನಾಗಾವಿ ಯಲ್ಲಮ್ಮ ದೇವಿಯ ನವರಾತ್ರಿ ಸೆ.22 ರಂದು ಪ್ರಾರಂಭವಾಗಿದ್ದು, ಪಲ್ಲಕ್ಕಿ ಉತ್ಸವ ಜಾತ್ರೋತ್ಸವ ಅ.7 ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 6 ಕ್ಕೆ ಅಭಿಷೇಕ, ಘಟ ಸ್ಥಾಪನೆ ಹಾಗೂ ಮಂಗಳಾರತಿ ನಡೆಯಿತು. ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯವರೆಗೆ ದೇವಿಯ ಸಹಸ್ರಾನಾಮ ಕುಂಕುಮಾರ್ಚನೆ, ಮಂತ್ರಪುಷ್ಪ ಸೇವೆಗಳು ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಅ.2 ಗುರುವಾರದ ವರೆಗೆ ನಡೆಯಲಿದೆ.

ಸೆ.30 ರಂದು ರಾತ್ರಿ 8 ಗಂಟೆಗೆ ದುರ್ಗಾಷ್ಟಮಿ ನಿಮಿತ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಅ.2 ರಂದು ವಿಜಯ ದಶಮಿ ನಿಮಿತ್ತ 4.30 ಗಂಟೆಗೆ ಸುಮಾರಿಗೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಂದ ಬನ್ನಿ ಪೂಜೆ ನಡೆಯಲಿದೆ. ಅ.7 ರಂದು ಮಧ್ಯಾಹ್ನ 1-30 ಗಂಟೆಗೆ ಪಲ್ಲಕ್ಕಿ ಉತ್ಸವ ಪ್ರಯುಕ್ತ ಶ್ರೀ ಲಚ್ಚಪ್ಪ ಮಲ್ಲಾರ ನಾಯಕ (ಸರಾಫ್) ನಿವಾಸದಲ್ಲಿ ಶ್ರೀ ವಿಶ್ವೇಶ್ವರ ಪೂಜೆ, ಶ್ರೀ ಗುರು ಪೂಜೆ, ಶ್ರೀ ದೇವಿ ಪಾದುಕಾ ಪೂಜೆ ಮತ್ತು ಶ್ರೀ ದೇವಿಯ ಪಲ್ಲಕ್ಕಿ ಪೂಜೆ ಜರುಗುವವು ಎಂದು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ದೇವಸ್ಥಾನಕ್ಕೆ ಸಂಜೆ 7 ಗಂಟೆಗೆ ತಲುಪಲಿದೆ. ದೇವಾಲಯದ ಗರ್ಭ ಗುಡಿಯ 5 ಪ್ರದಕ್ಷಣೆಯೊಂದಿಗೆ ದೇವಿಯ ಮಂಗಳಾರುತಿ, ದೇವಿಯ ಆಶೀರ್ವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾರಣ ಭಕ್ತಾಧಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಆಸೀಮ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ದೇವಸ್ಥಾನಕ್ಕೆ ಯಾವುದೇ ತರಹದ ಕಾಣಿಕೆ ಸಲ್ಲಿಸಬೇಕಾದಲ್ಲಿ ದೇವಸ್ಥಾನದ ಅಧ್ಯಕ್ಷರ ಹೆಸರಿನಲ್ಲಿ ಕೊಡತಕ್ಕದ್ದು ಹಾಗೂ ರಸೀದಿ ಪಡೆಯತಕ್ಕದ್ದು ಎಂದು ತಹಸೀಲ್ದಾರ್ ಅವರು ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!