Oplus_0

ಸ್ಟೇಷನ್ ತಾಂಡಾದ ತುಕಾರಾಮ ನಾಯಕ ಏರಿಯಾದ 3 ನೇ ವರ್ಷದ ನವರಾತ್ರಿ ಉತ್ಸವ | ಜಗದಂದಾ ದೇವಿ ಮೂರ್ತಿಯ ಮೆರವಣಿಗೆಗೆ ಕಂಬಳೇಶ್ವರ ಶ್ರೀಗಳು ಚಾಲನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ ಏರಿಯಾ ಹಾಗೂ ವೆಂಕಿ ಜಾಧವ ಅವರ ಮನೆಯ ಹತ್ತಿರದ ಬಂಜಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ 3 ನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ತ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆಗೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹಾಗೂ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಮತ್ತು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಕುಂಬ ಹೊತ್ತ‌ ಮಹಿಳೆಯರು, ಡಿಜೆ ಸೌಂಡ್ ಗೆ ಯುವಕರ ನೃತ್ಯ, ಹಲಗೆ ವಾದನಕ್ಕೆ ಬಂಜಾರ ಯುವತಿಯರ, ಮಹಿಳೆಯರ ನೃತ್ಯ ನೋಡುಗರ ಕಣ್ಮನ ಸೆಳೆಯಿತು.

ಈ ಸಂದರ್ಭದಲ್ಲಿ ತಾಂಡಾದ ನಾಯಕ ತುಕಾರಾಮ ಖೀರು ನಾಯಕ, ಮಂಜುನಾಥ ತಾರಾನಾಥ ನಾಯಕ, ಜೈ ಮಾತಾದಿ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಶಂಕರ ಚವ್ಹಾಣ ಹಾಗೂ ನವದುರ್ಗ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ಪವಾರ, ಮುಖಂಡರಾದ ವಿಠಲ ರಾಠೋಡ, ರಾಜು ರಾಠೋಡ, ರಾಜು ಚವ್ಹಾಣ, ವೆಂಕಿ ಜಾಧವ, ರಮೇಶಜಾಧವ, ಸುರೇಶ ಚವ್ಹಾಣ, ಲಕ್ಷ್ಮಣ ಚವ್ಹಾಣ, ನಾಗರಾಜ ರಾಠೋಡ, ರಾಮ ರಾಠೋಡ, ಚಂದ್ರಮ ಚವ್ಹಾಣ, ಅಶೋಕ ರಾಠೋಡ, ಚಂದರ ಮೊಟನಳ್ಳಿ, ರಾಮ ಸಭಾವಟ, ಪಾರಿಬಾಯಿ ಕಿಶನ, ಜೈನಾ ವಿಠ್ಠಲ, ಶಿವರಾಮ ಚವ್ಹಾಣ, ಅಶ್ವಥ ರಾಠೋಡ, ಸೇರಿದಂತೆ ಬಂಜಾರ ಸಮಾಜದ ಸಾವಿರಾರು ಮುಖಂಡರು, ಯುವಕರು ಭಾಗವಹಿಸಿದ್ದರು. ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Spread the love

Leave a Reply

Your email address will not be published. Required fields are marked *

You missed

error: Content is protected !!