Oplus_0

ನಾಗಾವಿ ಯಲ್ಲಮ್ಮ ದೇವಿಯ ನವರಾತ್ರಿ ಅ.11 ರಿಂದ ಪ್ರಾರಂಭ, ಅ.26 ರಂದು ಪಲ್ಲಕ್ಕಿ ಉತ್ಸವ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೇಶದ ಮುಖ್ಯ ಶಕ್ತಿ ಪೀಠಗಳಲ್ಲೊಂದಾದ, ರಾಷ್ಟ್ರಕೂಟ ಸಾಮ್ರಾಜ್ಯದ ಕುಲದೇವತೆಯಾಗಿ ಮತ್ತು ಕನ್ನಡ ನಾಡಿನ ಇತಿಹಾಸ ಪ್ರಸಿದ್ದ ವಿಶ್ವವಿದ್ಯಾಲಯವಾಗಿ ಮತ್ತು ಘಟಿಕಸ್ಥಳವಾಗಿ “ನಾಗಾವಿ’ಯ ಇಷ್ಟದೇವತೆಯಾಗಿದ್ದ, ಶ್ರೀ ನಾಗಾವಿ ಯಲ್ಲಮ್ಮ ದೇವಿಯ ನವರಾತ್ರಿ ಅ.11 ದಿಂದ ಪ್ರಾರಂಭವಾಗಲಿದೆ ಹಾಗೂ ಅ.26 ರಂದು ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದ್ದಾರೆ.

ಅ.11 ರಂದು ನವರಾತ್ರಿ ಪ್ರಾರಂಭ, ಘಟ ಸ್ಥಾಪನೆ:

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅ.11 ರಂದು ಬೆಳಗ್ಗೆ 6 ಗಂಟೆಗೆ ಅಭಿಷೇಕ, ಘಟಸ್ಥಾಪನೆ, ಮಹಾಮಂಗಳಾರತಿ ನಡೆಯುವುದು, ಅ.19 ರವರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಶ್ರೀದೇವಿಯ ಸಹಸ್ರನಾಮ ಕುಂಕುಮಾರ್ಚನೆ, ಮಂತ್ರ ಪುಷ್ಪ ಸೇವೆಗಳು ಹಾಗೂ ಪ್ರಸಾದ ವಿತರಣೆ ನಡೆಯಲಿದೆ, ಅ.18 ರಂದು ರಾತ್ರಿ ಗಂಟೆಗೆ ದುರ್ಗಾಷ್ಟಮಿ ನಿಮಿತ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಹಾಗೂ 20 ರಂದು ಸಂಜೆ 4.30 ಕ್ಕೆ ವಿಜಯ ದಶಮಿ ತಹಸೀಲ್ದಾರ್ ಮತ್ತು ರತ್ನಾಕರ ನಾಯಕ ಇವರಿಂದ ಬನ್ನಿ ಪೂಜೆ ನಡೆಯಲಿದೆ.

26 ರಂದು ಪಲ್ಲಕ್ಕಿ ಉತ್ಸವ:

ಪಟ್ಟಣದ ದಿ. ಶ್ರೀ ಲಚ್ಚಪ್ಪ ಮಲ್ಹಾರ ನಾಯಕ (ಸರಾಫ್) ನಿವಾಸದಲ್ಲಿ ಮಧ್ಯಾಹ್ನ 1.30 ಗಂಟೆಗೆ ಶ್ರೀ ವಿಶ್ವೇಶ್ವರ ಪೂಜೆ, ಶ್ರೀ ಗುರು ಪೂಜೆ, ಶ್ರೀ ದೇವಿ ಪಾದುಕಾ ಪೂಜೆ ಮತ್ತು ಶ್ರೀ ದೇವಿಯ ಪಲ್ಲಕ್ಕಿ ಪೂಜೆ ಜರುಗುವವು. ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 7 ಗಂಟೆಗೆ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ದೇವಸ್ಥಾನ ತಲುಪಿ, ದೇವಾಲಯದ ಗರ್ಭ ಗುಡಿಯ 5 ಪ್ರದಕ್ಷಣೆಯೊಂದಿಗೆ ದೇವಿಯ ಮಂಗಳಾರುತಿ, ದೇವಿಯ ಆಶೀರ್ವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಕಾರಣ ಭಕ್ತಾಧಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಆಸೀಮ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ. ದೇವಸ್ಥಾನಕ್ಕೆ ಯಾವುದೇ ತರಹದ ಕಾಣಿಕೆ ಸಲ್ಲಿಸಬೇಕಾದಲ್ಲಿ ದೇವಸ್ಥಾನದ ಅಧ್ಯಕ್ಷರ ಹೆಸರಿನಲ್ಲಿ ಕೊಡತಕ್ಕದ್ದು ಹಾಗೂ ರಸೀದಿ ಪಡೆಯತಕ್ಕದ್ದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!