Oplus_0

ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಹಲವು ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ, ಚಿತ್ತಾಪುರ ತಾಲೂಕಿಗೆ ಹಾಗೂ ಕಲಬುರಗಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಹರ್ಡಲ್ಸ್: ಪ್ರಥಮ – ಸುನೀಲ್, 1500ಮೀ ಓಟ: ಪ್ರಥಮ- ರೋಹಿತ್, 4*100ಮೀ ರಿಲೇ: ಪ್ರಥಮ – ರೋಹಿತ್, ಸುನೀಲ್, ಹರ್ಷಿತ್, ವೆಂಕಟೇಶ್. ತ್ರಿವಿಧ ಜಿಗಿತ: ಪ್ರಥಮ – ವೆಂಕಟೇಶ್. ಉದ್ದಜಿಗಿತ: ದ್ವಿತೀಯ -ವೆಂಕಟೇಶ್. ಗುಂಡು ಸರಪಳಿ ಎಸೆತ: ಪ್ರಥಮ – ರಾಜು. ಗುಂಡು ಸರಪಳಿ ಎಸೆತ: ದ್ವಿತೀಯ – ರಕ್ಷಿತಾ.

ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಡಾ. ಗುಂಡಣ್ಣ ಬಾಳಿ, ಜಾಕೀರ್ ಹುಸೇನ್ ಫತ್ತೆಖಾನ್, ಸಿದ್ದಲಿಂಗ ಜ್ಯೋತಿ ಅಭಿನಂದನೆಗಳನ್ನು ಸಲ್ಲಿಸಿ ರಾಜ್ಯಮಟ್ಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಶಿವಕುಮಾರ್ ಸರಡಗಿ, ಶರಣು ಸಜ್ಜನ್ ಶಿಕ್ಷಕರಾದ ಸಿದ್ದಲಿಂಗ ಬಾಳಿ, ಗುರು ವಿಂಬಡಶೆಟ್ಟಿ, ಬಾಬು ಕಣ್ಣೂರ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!