Oplus_0

ಸಮಸ್ತ ಭಕ್ತಾದಿಗಳಿಗೆ ಪಿಎಸ್ಐ ಮನವಿ | ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವ ಯಶಸ್ವಿಗೆ ಪೊಲೀಸ್ ಇಲಾಖೆಯ ನಿಯಮಗಳು ಪಾಲಿಸಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಇದೇ ಅ.26 ರಂದು ನಡೆಯಲಿರುವ ಪ್ರಯುಕ್ತ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಕೈಗೊಂಡಿರುವ ನಿಯಮಗಳನ್ನು ಸಮಸ್ತ ಭಕ್ತಾದಿಗಳು ಪಾಲಿಸಬೇಕು ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನಗಳ ಪಾರ್ಕಿಂಗ್ ವ್ಯವಸ್ಥೆ:

ಚಿತ್ತಾಪುರ ಪಟ್ಟಣದಿಂದ ಬರುವ ದ್ವಿಚಕ್ರ ವಾಹನಗಳು ಡಾ. ಪ್ರಭುರಾಜ್ ಕಾಂತಾ ರವರ ಹೊಲದಲ್ಲಿ ನಿಲುಗಡೆ ಮಾಡಬೇಕು, ಚಿತ್ತಾಪುರ ಪಟ್ಟಣದಿಂದ ಬರುವ ಆಟೋ, ಕಾರು ಹಾಗೂ ಇತರೆ ವಾಹನಗಳು ಅಂಬದಾಸ ತುರೆ ರವರ ಹೊಲದಲ್ಲಿ ನಿಲುಗಡೆ ಮಾಡಬೇಕು, ಕರದಾಳ-ಸಾತನೂರು ಕಡೆಯಿಂದ ಬರುವ ವಾಹನಗಳು ನಾಗಾವಿ ಎಜುಕೇಶನ್ ಹಬ್, ಸಂಜೀವಿನಿ ಆಂಜನೇಯ ದೇವಸ್ಥಾನ ಹಾಗೂ ಪ್ರವಾಸಿ ಮಂದಿರದ ಹತ್ತಿರ ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು.

ವಾಹನ ನಿಲುಗಡೆ ನಿಯಮಗಳು:

ವಾಹನಗಳನ್ನು ಕಡ್ಡಾಯವಾಗಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲ್ಲಿಸಬೇಕು, ದೇವಸ್ಥಾನದ ಮುಂಭಾಗದ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ವಾಹನ ನಿಲುಗಡೆ ಮಾಡಬಾರದು, ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ವಾಹನ ನಿಲುಗಡೆ ಮಾಡಿದರೆ ದಂಡ ವಿಧಿಸುವುದು ಹಾಗೂ ನಿಯಮಾನುಸಾರ ವಾಹನ ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗುವುದು,

ಸಂಚಾರ ನಿರ್ಬಂಧ:

ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾದ ನಂತರ ದೇವಸ್ಥಾನದ ಕಡೆಗೆ ತೆರಳುವ ವಾಹನಗಳ ಸಂಚಾರವನ್ನು ದಿಗ್ಗಾಂವ ಕ್ರಾಸ್‌ನಿಂದ ನಿರ್ಬಂಧಿಸಲಾಗುವುದು, ಸಾರ್ವಜನಿಕರು ಪೊಲೀಸ್ ಇಲಾಖೆಯ ಸಂಚಾರ ಸೂಚನೆಗಳನ್ನು ಪಾಲಿಸಿ ಸಹಕರಿಸಬೇಕು.

ದೇವಸ್ಥಾನದ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ: 

ಪಲ್ಲಕ್ಕಿ ಪ್ರದಕ್ಷಿಣೆಯ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ವಿತರಿಸಲಾದ ಪಾಸ್ ಹೊಂದಿರುವವರಿಗೆ ಮಾತ್ರ ದೇವಸ್ಥಾನದ ಒಳಭಾಗಕ್ಕೆ ಪ್ರವೇಶ ನೀಡಲಾಗುವುದು, ಪ್ರದಕ್ಷಿಣೆ ನಡೆಯುವ ಸಮಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ, ಪ್ರದಕ್ಷಿಣೆ ಮುಗಿದ ನಂತರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದು.

ಭಕ್ತಾದಿಗಳು ದೇವಸ್ಥಾನದ ಮುಖ್ಯ ದ್ವಾರದ ಪಕ್ಕದಲ್ಲಿರುವ ಬಾಗಿಲಿನ ಮೂಲಕ ಪ್ರವೇಶಿಸಬೇಕು, ಮುಖ್ಯ ದ್ವಾರದ ಮೂಲಕ ಒಳಪ್ರವೇಶಕ್ಕೆ ಅವಕಾಶವಿರುವುದಿಲ್ಲ. ದೇವಸ್ಥಾನದ ಮುಖ್ಯ ದ್ವಾರ ಮತ್ತು ದಿಡ್ಡಿ ಬಾಗಿಲಿನ ಮೂಲಕ ಸಾರ್ವಜನಿಕರ ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗುವುದು. ಅ.26 ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ದೇವಸ್ಥಾನದ ಒಳಭಾಗದಲ್ಲಿ ಭಕ್ತಾದಿಗಳಿಗೆ ಪ್ರದಕ್ಷಿಣೆ ಮಾಡಲು ಅವಕಾಶವಿರುವುದಿಲ್ಲ. ಎಲ್ಲ ಭಕ್ತಾದಿಗಳು ಸಹಕರಿಸಬೇಕು.

ಅಂಗಡಿ ಮತ್ತು ಬಂಡಿಗಳ ವ್ಯವಸ್ಥೆ:

ದೇವಸ್ಥಾನದ ಮುಂಭಾಗದ ರಸ್ತೆ ಬದಿಗಳಲ್ಲಿ ಯಾವುದೇ ಅಂಗಡಿ ಅಥವಾ ಬಂಡಿಗಳನ್ನು ಹಾಕಬಾರದು, ಸಾಬಣ್ಣ ಹೋಳಿಕಟ್ಟಿ ರವರ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಅಂಗಡಿ ಮತ್ತು ಬಂಡಿಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ. ವ್ಯಾಪಾರಸ್ಥರು ನಿಗದಿಪಡಿಸಿದ ಸ್ಥಳದಲ್ಲಿಯೇ ವ್ಯಾಪಾರ ನಡೆಸಬೇಕು.

ಕಳ್ಳತನದ ಬಗ್ಗೆ ಮುನ್ನೆಚ್ಚರಿಕೆ: 

ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಈ ಕೆಳಕಂಡ ಮುನ್ನೆಚ್ಚರಿಕೆಗಳನ್ನು ವಹಿಸಬೇಕು: ಜೇಬು ಕಳ್ಳರ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ತಮ್ಮ ಬೆಲೆಬಾಳುವ ಆಭರಣಗಳು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಜನಸಂದಣಿಯಲ್ಲಿ ತಮ್ಮ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸಬೇಕು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.

ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆಯು ಶಾಂತಿಯುತವಾಗಿ, ಸುಗಮವಾಗಿ ಹಾಗೂ ಸುರಕ್ಷಿತವಾಗಿ ನಡೆಯಲು ಸಾರ್ವಜನಿಕರು ಮೇಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಅವರು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!