ಪೇಠಶಿರೂರು ಅಭಿಮಾನಿಗಳಿಂದ ಶಿವಯ್ಯ ಗುತ್ತೇದಾರ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಪೇಠಶಿರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಯ್ಯ ಗುತ್ತೇದಾರ ಅವರ 54 ನೇ ಜನ್ಮದಿನವನ್ನು ಅಭಿಮಾನಿಗಳ ಬಳಗ ವತಿಯಿಂದ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರಾಜು ಸಾಹುಕಾರ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶಿವಯ್ಯ ಗುತ್ತೇದಾರ ಈ ಭಾಗದ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ತಾಲೂಕು ಪಂಚಾಯತ್ ಸದಸ್ಯರಾಗಿ ಅನೇಕ ಜನಪರ ಕೆಲಸಗಳು ಮಾಡಿ ಜನಮನ್ನಣೆ ಪಡೆದಿದ್ದಾರೆ. ಹೀಗೆ ಮುಂದಿನ ರಾಜಕೀಯ ಜೀವನದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಾಶಪ್ಪ ಲಾಳಿ, ಅಂಬಣ್ಣ ದಂಡೋತಿ, ಕಲ್ಯಾಣಸಿಂಗ್ ರಜಪುತ್, ರಾಘವೇಂದ್ರ ರಜಪುತ್, ದೇವಿಂದ್ರಪ್ಪ ಕಮಕನೂರ, ಮಾರುತಿ ನಾಟೀಕಾರ, ಸತೀಶ್ ಗುತ್ತೇದಾರ, ಮಲ್ಲಿಕಾರ್ಜುನ ದಂಡೋತಿ, ದಶರಥ ಸೀತಾಳೆ, ಸಾಬಣ್ಣ ಕೀರಣಗಿ, ರವಿ ಗುತ್ತೇದಾರ, ಶ್ರೀನಿವಾಸ ಗುತ್ತೇದಾರ, ಸಿದ್ದು ನಾಟೀಕಾರ, ಬಸವರಾಜ ಹಣಬಿ ಹಣಮಂತ ದೇವರ ಸಂಘದ ಸದಸ್ಯರು ಕೆಕ್ ಕತ್ತರಿಸಿ ಶುಭಾಶಯಗಳು ಕೋರಿದರು.

