Oplus_0

ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ‌ವಸತಿ ಶಾಲೆಯ ವಾರ್ಷೀಕೋತ್ಸವ | ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಭವಿಷ್ಯ ರೂಪಿಸಿಕೊಳ್ಳಿ: ಶೇರಿಕಾರ್ ಕರೆ 

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪತ್ರಕರ್ತ ಜಗನ್ನಾಥ ಶೇರಿಕಾರ್ ಕರೆ ನೀಡಿದರು.

ಅವರು ತಾಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ‌ವಸತಿ ಶಾಲೆಯ ವಾರ್ಷೀಕೋತ್ಸವವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು‌ ದೊಡ್ಡ ಕನಸುಗಳನ್ನು ಕಾಣಬೇಕು ಅದರ ನನಸು ಮಾಡಲು ನಿರಂತರ ಓದಿನ‌ ಮೂಲಕ ಛಲದಿಂದ ಶ್ರಮಿಸಬೇಕೆಂದು ಪೌರ ಕಾರ್ಮಿಕ‌ ಮಹಿಳೆ ಆಶಾ ಕಂದಾರ ರಾಜಸ್ಥಾನ ಆಡಳಿತ ಸೇವೆಗೆ ಆಯ್ಕೆಯಾಗಿರುವ ಮತ್ತು ಐಪಿಎಸ್ ಅಧಿಕಾರಿ ದಿಂಡಿಗಲ್ ನ ಸಾಧಕಿ ಎನ್ ಅಂಬಿಕಾ, ಕೃತಕ ಕಾಲು ಹೊಂದಿದ್ದರೂ ಅರುಣಿಮಾ ಸಿಂಹಾ ಅವರು ಮೌಂಟ್ ಎವೆರೆಸ್ಟ್ ಏರಿ‌ ಸಾಹಸ ಮಾಡಿರುವುದು, ಬಿಹಾರದಲ್ಲಿ ಗುಡ್ಡ ಕತ್ತರಿಸಿ ರಸ್ತೆ ನಿರ್ಮಿಸಿದ ದಶರಥ ಮಾಂಝಿ ಅವರ ಸಾಧನೆ ವಿವರಿಸಿದರು.

ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಕೊಡೆಕಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಂಯಮ ಹಾಗೂ ಪರಿಶ್ರಮ ಗುಣ ಮತ್ತು ತಂದೆತಾಯಿ ಗುರು ಹಿರಿಯರಿಗೆ ಗೌರವ ಕೊಡುವ ಗುಣಗಳು ರೂಢಿಸಿಕೊಳ್ಳಬೇಕು. ಉತ್ತಮ‌ ಫಲಿತಾಂಶ ತರುವ ಮೂಲಕ ಶಾಲೆಗೆ ಕೀರ್ತಿ ತರಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾಜಶೇಖರ ಮಾಂಗ್ ಮಾತನಾಡಿ, ಬಡತನ ಹಾಗೂ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿಯಾಗಬಾರದು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಶೇ. 100 ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತರಬೇಕು, ಮಾದರಿ ವ್ಯಕ್ತಿಗಳಾಗಿ‌ ತಂದೆತಾಯಿಯ ಸೇವೆ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಮಲ್ಲಪ್ಪ ಚಿಂತಕುಂಟಾ, ರೇವಣಸಿದ್ದ ಹಾಗೂ ಪಾಲಕರ ಪ್ರತಿನಿಧಿ ಮಲ್ಲಿಕಾರ್ಜುನ ಪತ್ರಕರ್ತ ರಮೇಶ ದೇವನಕಲ್ ಹಾಗೂ ವಸತಿ ಶಾಲೆ ಸಿಬ್ಬಂದಿಗಳಾದ ಶಿಕ್ಷಕರಾದ ಅಶೋಕ ಹಡಪದ್, ಶಿವಾನಂದ ಬೀಳಗಿ, ನಾಗಶೆಟ್ಟಿ, ಗೋಪಾಲ್ ದಾಸ್ ಸಾಹುಕಾರ್, ರೇವಣಸಿದ್ದಯ್ಯ ಹಿರೇಮಠ, ಮಹಾನಂದ, ಅಶೋಕ್, ಕವಿತಾ, ಭಾಗ್ಯ ಜ್ಯೋತಿ, ಸಹಾಯಕ ಮಹೇಶ್, ನಿಲಯಪಾಲಕ ಶಿವಕುಮಾರ್ ಹಿರೇಮಠ, ಶಾಲಾ ಪ್ರಧಾನಿ ಶಿವಾನಿ ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು, ಶಿಲ್ಪಾ ಮತ್ತು ಭುವನೇಶ್ವರಿ ನಿರೂಪಿಸಿದರು, ಭವಾನಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!