Oplus_0

ರಾಜಧಾನಿಯಲ್ಲಿ ಕಡೇಚೂರ್ ಗ್ರೂಪ್ ಉದ್ಯಮದ ಜೈ ಭವಾನಿ ಹೋಟೆಲ್ ಗೆ ಸುನಿಲ್ ಶರ್ಮಾ ಚಾಲನೆ

ನಾಗಾವಿ ಎಕ್ಸಪ್ರೆಸ್ 

ಬೆಂಗಳೂರು: ಭಾರತೀಯ ಪ್ರಮುಖ ರಾಜ್ಯಗಳ ರುಚಿ ಸವಿಯುವ ನೂತನ ಕಡೇಚೂರ್ ಉದ್ಯಮದ ಜೈ ಭವಾನಿ ಹೋಟೆಲ್ ನ್ನು ಗಾಂಧಿ ನಗರದ ವಿಂಟೇಜ್ ಪಾರ್ಕ್ ಹೋಟೆಲಿನಲ್ಲಿ ಶುಕ್ರವಾರ ಶರ್ಮಾ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಮಾಲಿಕ ಸುನಿಲ್ ಶರ್ಮಾ ದೀಪ ಬೆಳಗಿಸಿ, ಪೂಜೆ ನೆರವೇರಿಸಿ ಹೋಟೆಲ್ ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜಸ್ಥಾನಿ, ಪಂಜಾಬಿ, ಗುಜರಾತಿ, ಉತ್ತರಭಾರತ, ದಕ್ಷಿಣ ಭಾರತ ಹಾಗೂ ಜೈನ್ ಶೈಲಿಯ ಖಾದ್ಯಗಳು ಒಂದೇ ಸೂರಿನಡಿ ಗ್ರಾಹಕರಿಗೆ ದೊರಕುವಂತಾದುದು ವಿಶೇಷ. ಹೋಟೆಲ್ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಜನಪ್ರಿಯವಾಗಲಿ. ಹೋಟೆಲ್ ಉದ್ಯಮದ ಅನುಭವಿ ಯೋಗೇಶ್ ರಾಥೋಡ್ ಸೇರಿದಂತೆ ಇಡೀ ತಂಡ ಯಶಸ್ಸು ಹೊಂದಲಿ ಎಂದು ಸುನಿಲ್ ಶರ್ಮಾ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಖ್ಯಾತ ಉದ್ಯಮಿ ಸತೀಶ್ ವಿ. ಗುತ್ತೇದಾರ ಮಾತನಾಡಿ, ಕಲಬುರಗಿಯ ಉದ್ಯಮಿಗಳು ರಾಜಧಾನಿಯಲ್ಲಿ ಹೋಟೆಲ್ ಪ್ರಾರಂಭ ಮಾಡುವುದರ ಮೂಲಕ ನೂತನ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಕಡೇಚೂರ್ ಗ್ರೂಪ್ ಖ್ಯಾತ ಉದ್ಯಮಿ ಸಮೂಹವಾಗಿದ್ದು ಇನ್ನಷ್ಟು ಸಂಸ್ಥೆ ಆರಂಭಿಸುವಂತಾಗಲಿ ಎಂದು ಶುಭಾ ಕೋರಿದರು.

ಮುಖ್ಯಮಂತ್ರಿಗಳ ಕಚೇರಿ ಅಧೀನ ಕಾರ್ಯದರ್ಶಿ ಅರುಣ್ ಪುರ್ಟಾಡೊ ಮಾತನಾಡಿ, ಸ್ಪರ್ಧಾತ್ಮಕ ಉದ್ಯಮ ರಂಗದಲ್ಲಿ ಗ್ರಾಹಕರ ಪ್ರೀತಿ ಗಳಿಸಲು ರುಚಿಕಟ್ಟಾದ ಆಹಾರವನ್ನು ಒದಗಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಉತ್ತಮವಾಗಿ ಸಂಸ್ಥೆ ಮುನ್ನಡೆಯಲಿ ಎಂದು ಆಶಿಸಿದರು.

ಹೋಟೆಲ್ ಪಾಲುದಾರರಾದ ಡಾ. ರಾಜೇಶ್ ಕಡೇಚೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೋಟೆಲ್ ಮತ್ತು ವಸತಿಗೃಹ ಆರಂಭದಿಂದ ಉತ್ತಮ ಆಹಾರ ಗ್ರಾಹಕರಿಗೆ ಒದಗಿಸುವುದಲ್ಲದೆ ಸುಮಾರು ಅರುವತ್ತಕ್ಕಿಂತ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಲಭಿಸುವಂತಾಗಿದೆ ಎಂದರು.

ಹೋಟೆಲ್ ಪಾಲುದಾರ ಯೋಗೇಶ್ ರಾಥೋಡ್ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಗೆಜ್ಜೆ ಗಿರಿ ಕ್ಷೇತ್ರದ ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ, ರಾಜೇಶ್ ಶರ್ಮಾ ಹೋಟೆಲ್ ಮಾಲಕರಾದ ಮಹೇಂದ್ರ ಬೋರಾ, ರಾಕೇಶ್ ಬೋರಾ, ಗೋಲ್ಡನ್ ರೆಸಿಡೆನ್ಸಿಯ ಮಾಲಕರಾದ ಮುರಳಿ ಬಲದೇವ್, ಜೈನ ಸಮಾಜದ ಮುಖಂಡರಾದ ಸಂದೀಪ್ ಕುಮಾರ್ ಬಾಗರೇಚ, ಶೈಲೇಶ್ ಬನ್ಸಾಲಿ, ಶೈಲೇಶ್ ತಾತೇಡ್, ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ, ಹೈಕೋರ್ಟ್ ನ್ಯಾಯವಾದಿ ಶಿಲ್ಪಾ ಭಾರ್ಗವ್ ಗೋಗಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುಜಾತಾ ಈಶ್ವರ್ ಶುಭಾ ಕೋರಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ರಮೇಶ್ ಪೆರ್ಲ, ಕೃಷ್ಣಮ್ಮ ಸುಭಾಷ್ ಗೋಗಿ, ಅನ್ನಪೂರ್ಣ ತೇಲಂಗ್, ಸವಿತಾ ಗುತ್ತೇದಾರ, ಹೈಕೋರ್ಟ್ ನ್ಯಾಯವಾದಿಗಳಾದ ಈಶ್ವರ್ ಭೀಮನೇರಿ, ಎನ್ ಭಾರ್ಗವ್, ನಿಶಾಂತ್ ತೆಲಂಗ್ ವಸಂತ ಕುಮಾರ್, ಇಂತೇಜಾಮ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!