Oplus_0

ಜಾತಿ ಜನಗಣತಿಯಲ್ಲಿ ಕುಂಬಾರ ಎಂದು ನಮೂದಿಸಲು ಕುಂಬಾರರ ಯುವ ಸೈನ್ಯ ರಾಜ್ಯಾಧ್ಯಕ್ಷ ಜಗದೇವ ಕುಂಬಾರ ಕರೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ಕುಂಬಾರ ಎಂದು ನಮೂದಿಸಬೇಕು ಎಂದು ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮೀಕ್ಷೆಯ‌ ಒಟ್ಟು 60 ಪ್ರಶ್ನೆಗಳ ಪೈಕಿ ಪ್ರಶ್ನೆ 8 ಧರ್ಮ ಕಾಲಂನಲ್ಲಿ ಹಿಂದೂ, ಪ್ರಶ್ನೆ 9 ಜಾತಿ ಕಾಲಂನಲ್ಲಿ ಕುಂಬಾರ ಪ್ರಶ್ನೆ 10 ಉಪಜಾತಿ ಕಾಲಂನಲ್ಲಿ ಇಲ್ಲ ಅಂತ ಬರೆಸಿ, ಪ್ರಶ್ನೆ 11 ಜಾತಿಗೆ ಇರುವ ಇನ್ನಿತರ ಸಮಾನಾರ್ಥಕ (ಪರ್ಯಾಯ) ಹೆಸರು ಕಾಲಂನಲ್ಲಿ – ನೀವು ಗುರುತಿಸಲ್ಪಡುವ ಮೇಲಿನ ಪಟ್ಟಿಯಲ್ಲಿ ಬರುವ ಯಾವುದಾದರೂ ಹೆಸರು ಬರೆಸಿ. ಪ್ರಶ್ನೆ 24 (e) ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸಿ. ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸಿ. ಪ್ರಶ್ನೆ 30 ನಿಮ್ಮ ಕುಟುಂಬದ ಕುಲಕಸುಬು ಕಾಲಂನಲ್ಲಿ – ಕುಂಬಾರರು, ಪ್ರಶ್ನೆ 32 ನಿಮ್ಮ ಕುಲಕಸುಬಿನಿಂದ ಬಂದ ಕಾಯಿಲೆಗಳು ಕಾಲಂನಲ್ಲಿ – ಯಾವೂದೂ ಇಲ್ಲ ಅಂತಾ ಬರೆಸಿ ಎಂದು ತಿಳಿಸಿದ್ದಾರೆ.

ಒಟ್ಟಾರೆ ನಾವು ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ ನಮ್ಮ ಜನಾಂಗವು ಈ ಬಾರಿ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ‘ಕುಂಬಾರ’ ಸಮಾಜದ ಶಕ್ತಿ ಪ್ರದರ್ಶನಕ್ಕೆ ಇದು ಒಂದು ಉತ್ತಮ ಅವಕಾಶವಾಗಿದ್ದು ಕುಂಬಾರ ಜನಾಂಗದವರಾದ ನಾವು ಸಮೀಕ್ಷೆಯಲ್ಲಿ ಕುಂಬಾರ ಎಂದು ಬರೆಸುವ ಮೂಲಕ ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!