ಸಾತನೂರ ಸರ್ಕಾರಿ ಪ್ರೌಢ ಶಾಲೆಗೆ ಶೇ.98 ಫಲಿತಾಂಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಶೇ.98 ಫಲಿತಾಂಶ ಬಂದಿದೆ ಎಂದು ಮುಖ್ಯ ಶಿಕ್ಷಕಿ ತ್ರಿವೇಣಿ ನಾಟೀಕರ್ ತಿಳಿಸಿದ್ದಾರೆ.
ಪರೀಕ್ಷೆಗೆ ಕುಳಿತ 50 ವಿದ್ಯಾರ್ಥಿಗಳ ಪೈಕಿ, (24 ವಿದ್ಯಾರ್ಥಿಗಳು, 26 ವಿದ್ಯಾರ್ಥಿನಿಯರು) 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಡಿಸ್ಟಿಂಕ್ಷನ್ 3, ಪ್ರಥಮ ಶ್ರೇಣಿ 22, ದ್ವಿತೀಯ ಶ್ರೇಣಿ 14, ತೃತೀಯ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಕ್ಕಳ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕಿ ತ್ರಿವೇಣಿ ನಾಟೀಕರ ಮತ್ತು ಸಿಬ್ಬಂದಿ ವರ್ಗ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಶಾಲೆಯ ಹಿರಿಯ ದೈಹಿಕ ಶಿಕ್ಷಕ ದೇವೇಂದ್ರರೆಡ್ಡಿ ದುಗನೂರ್ ತಿಳಿಸಿದ್ದಾರೆ.

