ಸಾತನೂರ ಹೊಲದಲ್ಲಿ ಕಣಕಿ ಬಣೆಮಿಗೆ ಬೆಂಕಿ, ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮದ ಉಮೇಶ್ ನಾಗೇಂದ್ರಪ್ಪ ಕಲಾಲ್ ಎಂಬುವರ ಹೊಲದಲ್ಲಿ ಕೂಡಿ ಹಾಕಿದ ಕಣಕಿ ಬಣೆಮಿಗೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.
ಅಗ್ನಿ ಶಾಮಕ ಸಹಾಯಕ ಠಾಣಾಧಿಕಾರಿ ಶರಣಯ್ಯ ಗುತ್ತೇದಾರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಸಲೀಂ ಹಾಗೂ ಅಗ್ನಿ ಶಾಮಕ ಚಾಲಕ ಸುರೇಶ್, ಮಲ್ಲಿಕಾರ್ಜುನ್ ಡಿ. ಎಂ, ನಬಿಸಾಬ್ ಅವರು ಘಟನೆಯ ಸ್ಥಳಕ್ಕೆ ದಾವಿಸಿ ಹೋಗಿ ನೋಡಲಾಗಿ ಕಣಕಿ ಬಣಮೆಗೆ ಬೆಂಕಿ ಬಿದ್ದು ಧಗ ಧಗನೆ ಉರಿಯುತ್ತಿದ್ದು ಕೂಡಲೇ ಜಲಹಾನದಲ್ಲಿನ ನೀರು ಉಪಯೋಗಿಸಿಕೊಂಡು ಬೆಂಕಿ ನಂದಿಸಲಾಯಿತು.
ಅಂದಾಜು ಮೌಲ್ಯ 50 ಸಾವಿರ ನಷ್ಟವಾಗದೆ, ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ನಂದಿಸಲಾಯಿತು. ಈ ಸಂದರ್ಭದಲ್ಲಿ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

