Oplus_0

ಶಹಾಪುರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಭೀಮಣ್ಣ ಅಂಚೆಸೂಗೂರು ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಶಹಾಪುರ: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಶಹಾಪುರ ತಾಲೂಕಿನ ಅಧ್ಯಕ್ಷರನ್ನಾಗಿ ಭೀಮಣ್ಣ ಅಂಚೆಸೂಗೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರೆದ ಸಭೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಧ್ಯಕ್ಷರಾಗಿ ಭೀಮಣ್ಣ ಅಂಚೆಸೂಗೂರು ಬಾಲಕಿಯರ ಸ.ಪ.ಪೂ ಕಾಲೇಜು ಶಹಾಪುರ, ಕಾರ್ಯಾಧ್ಯಕ್ಷರಾಗಿ ಸಿದ್ದಣ್ಣ ಶ್ರೀ ಚನ್ನಬಸವೇಶ್ವರ ಮಹಿಳಾ ಪ.ಪೂ ಕಾಲೇಜು ಶಹಾಪುರ, ಉಪಾಧ್ಯಕ್ಷರಾಗಿ ಸ್ಮಿತಾ ಸ.ಪ.ಪೂ ಕಾಲೇಜು ಚಾಮನಾಳ, ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಪ್ಪ ಹುಂಡೆಕಲ್ ಸ.ಪ.ಪೂ ಕಾಲೇಜು ಗೋಗಿ, ಖಜಾಂಚಿಯಾಗಿ ಮಶಾಕ್ ಬಾಲಕರ ಸ.ಪ.ಪೂ ಕಾಲೇಜು ಶಹಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಶೇಖರ್ ವಾರಿ ಚರಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜು ಶಹಾಪುರ, ಜಿಲ್ಲಾ ಲೆಕ್ಕ ಪರಿಶೋಧಕರಾಗಿ ಸುರೇಶ್ ಅರುಣಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಶಹಾಪುರ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಂತರ ಮಾತನಾಡಿದ ಹೊಸಮನಿ, ಪದವಿ ಪೂರ್ವ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಉಪನ್ಯಾಸಕರ ಹಿತಾಸಕ್ತಿಗಳನ್ನು ಕಾಪಾಡುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈ ಎಚ್ ವಜ್ಜಲ್ ಅಯ್ಯಣ್ಣ ಇನಾಂದಾರ್,  ದೇವೇಂದ್ರಪ್ಪ ಕಟ್ಟಿಮನಿ, ಸಂತೋಷ್ ಜುನ್ನಾ, ಅಂಬ್ಲಯ್ಯ ಸೈದಾಪುರ್, ಧರ್ಮಣ್ಣ ಗೌಡ ಪೊಲೀಸ್ ಬಿರಾದಾರ್, ಗುರುಲಿಂಗಪ್ಪ ಸಾಗರ್, ಭೀಮಪ್ಪ ಪೀರಾಪುರ್, ಸಾಬಣ್ಣ ಮೈತ್ರೆ, ಗುರುನಾಥ್ ದೇಸಾಯಿ, ಎಚ್.ಎಮ್ ಪಾಟೀಲ್, ಗಿರೀಶ್ ಸಜ್ಜನ್, ನಾಗರಾಜ, ಕಾಮಣ್ಣ ಜೆಕೆ, ಸಿದ್ದಣ್ಣ ಒಡೆಯರ್, ರವಿಕುಮಾರ್, ದಯಾನಂದ ಟಿ, ಭಾರತಿ, ಶಹೀನಾ ಬೇಗಮ್ ಮುಂತಾದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!