ಚಿತ್ತಾಪುರದಲ್ಲಿ ನಾಗರ ಪಂಚಮಿಯ ಹಬ್ಬದ ಸಂಭ್ರಮ | ನಾಗರ ಕಟ್ಟಿಯ ರಕ್ಷಣೆಗೆ ಎಲ್ಲರೂ ಒಂದಾಗಿ: ಸುಲೇಗಾಂವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಮರಾವತಿ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶ್ವ ಹಿಂದೂ ಪರಿಷತ್ ವತಿಯಿಂದ ನಾಗರ ಪಂಚಮಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವಿಭಾಗೀಯ ಕಾರ್ಯದರ್ಶಿ ಪ್ರಾಂತ ಸಹ ಸೇವಾ ಪ್ರಮುಖ ಅಂಬರೀಷ್ ಸುಲೇಗಾಂವ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಒಂದು ನಾಗದೇವತೆಗೆ ಅಥವಾ ನಾಗರ ಕಟ್ಟೆಗೆ ಧಕ್ಕೆ ಬಂದಾಗ ಹಿಂದೂಗಳೆಲ್ಲಾ ಒಂದಾಗಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನಾಗದೇವರ ಇತಿಹಾಸ ಮತ್ತು ಸ್ಥಳದ ಇತಿಹಾಸ ಹಾಗೂ ಮುಂದಿನ ದಿನಗಳಲ್ಲಿ ತಮ್ಮ ಶ್ರದ್ಧಾ ದೇವರಾದ ನಾಗದೇವತೆಯನ್ನು ಕಾಪಾಡಿಕೊಳ್ಳಲು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ನಾಗರ ಕಟ್ಟೆಯನ್ನು ಎಲ್ಲರೂ ಒಂದಾಗಿ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ, ತನು ಮನ ಧನದಿಂದ ಈ ಒಂದು ನಾಗರ ಕಟ್ಟೆಯನ್ನು ಜೀರ್ಣೋದ್ಧಾರ ಮಾಡೋಣ ಆದ್ದರಿಂದ ನೀವೆಲ್ಲರೂ ನಮ್ಮೊಂದಿಗೆ ಇರಬೇಕೆಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ವಿಭಾಗ ಮಾತೃಶಕ್ತಿ ಪ್ರಮುಖರು ಸುವರ್ಣ ಶಿಲ್ಪಿ, ಜಿಲ್ಲಾ ಕಾರ್ಯದರ್ಶಿ ಮಹದೇವ ಅಂಗಡಿ, ಜಿಲ್ಲಾ ಸೇವಾ ಪ್ರಮುಖರು ವೀರಣ್ಣ ಶಿಲ್ಪಿ, ಜಿಲ್ಲಾ ಮಾತೃಶಕ್ತಿ ಸತ್ಸಂಗ ಪ್ರಮುಖರು ನಿರ್ಮಲಾ ಭಂಗಿ, ಜಿಲ್ಲಾ ಗೋರಕ್ಷ ಪ್ರಮುಖರು ಮಲ್ಲಿಕಾರ್ಜುನ ಮುಗುಳನಾಗಾಂವ, ಪ್ರಖಂಡ ಕಾರ್ಯದರ್ಶಿ ಸಾಯಿಬಣ್ಣ ಪೂಜಾರಿ, ಸಂಯೋಜಕ ಮಲ್ಲಿಕಾರ್ಜುನ್ ಉಪ್ಪಾರ್, ನಗರ ಅಧ್ಯಕ್ಷ ಯಲ್ಲಾಲಿಂಗ ಸುಲ್ತಾನಪುರ, ನಗರ ಕಾರ್ಯದರ್ಶಿ ಸುಧೀರ್ ಬೇನಕನಳ್ಳಿ, ಎಲ್ಲಪ್ಪ ಪುಂಗಿ, ರವಿ ಪೂಜಾರಿ, ಶೀಲಾ ದೊಡ್ಡಮನಿ, ಜ್ಯೋತಿ ಜಗನ್ನಾಥ್, ಸೀಮಾ ಜಿತುರೆ, ವಿಜಯಲಕ್ಷ್ಮಿ ಬಿರಾದಾರ, ಅನ್ನಪೂರ್ಣ, ಪವಿತ್ರಾ ಹಿರೇಮಠ, ಊರಿನ ಮಹಿಳೆಯರು ನಾಗದೇವರ ಭಕ್ತರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

