ಚಿತ್ತಾಪುರ ಸ್ಟೇಷನ್ ತಾಂಡಾದಲ್ಲಿ 24 ನೇ ನವರಾತ್ರಿ ಉತ್ಸವ, ರಸಮಂಜರಿ ಕಾರ್ಯಕ್ರಮ
ಬಂಜಾರ ಸಮಾಜದವರು ಕಾಯಕಜೀವಿಗಳು: ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಸವಣ್ಣನವರ ತತ್ವಗಳು ಅಳವಡಿಸಿಕೊಂಡ ಬಂಜಾರ ಸಮಾಜದವರು ಕಾಯಕ ಜೀವಿಗಳು, ಕಾಯಕದಲ್ಲಿಯೇ ಕೈಲಾಸ ಕಂಡವರು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಸ್ಟೇಷನ್ ತಾಂಡಾದ ಶ್ರೀ ಸೇವಾಲಾಲ್ ಜಗದಂಬಾ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ 24 ನೇ ವರ್ಷದ ನವರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಬಂಜಾರ ಸಮಾಜಕ್ಕೂ ಇಂದಿನ ಬಂಜಾರ ಸಮಾಜಕ್ಕೂ ಬಹಳ ವ್ಯತ್ಯಾಸವಿದೆ, ಪ್ರಸ್ತುತ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಂಜಾರ ಸಮಾಜ ಅಭಿವೃದ್ಧಿಯಾಗಿದ್ದು ಇತರರಿಗೆ ಮಾದರಿ ಸಮಾಜವಾಗಿದೆ ಎಂದರು.
ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಗುಣಗಳನ್ನು ಅಳವಡಿಸಿಕೊಂಡ ಬಂಜಾರ ಸಮಾಜದವರು ಸರ್ಕಾರಿ ಅಧಿಕಾರಿಗಳಾಗಿ ಮತ್ತು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಮೂಲಕ ಸ್ಟೇಷನ್ ತಾಂಡಾಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಪಟ್ಟಣದಲ್ಲಿ ನಿರ್ಮಿಸಿದ ಕ್ರೀಡಾಂಗಣದ ಸದುಪಯೋಗ ಬಂಜಾರ ಸಮಾಜದ ಯುವಕ, ಯುವತಿಯರು ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಬಂಜಾರ ಸಮಾಜದವರು ಈಗ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಕಾಲ ಬದಲಾದಂತೆ ಬಂಜಾರ ಸಮಾಜದವರು ಕೂಡ ಬದಲಾವಣೆಗೊಂಡು ಪ್ರಗತಿ ಹೊಂದಿದ್ದಾರೆ, ಅವರಿಗೆ ದುರ್ಗಾ ಮಾತೆಯ ಆಶೀರ್ವಾದ ಆಗಿದೆ ಹೀಗಾಗಿ ಅವರು ಒಂದಿಲ್ಲೊಂದು ಕಾಯಕದಲ್ಲಿ ತೊಡಗಿ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.
ಓರಿಯಂಟ್ ಸಿಮೆಂಟ್ ಕಂಪೆನಿ ಉಪಾಧ್ಯಕ್ಷ ಸಂತೋಷ ಶರ್ಮಾ ಮಾತನಾಡಿ, ಬಂಜಾರ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಹಾಗೂ ನಶೆಯಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತರಿತಾಂಡಾದ ಅನೀಲ್ ಮಹಾರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ, ಬಂಜಾರ ಸಮಾಜದ ಮುಖಂಡರಾದ ವಿಠಲ್ ಜಾಧವ, ಗೋಪಾಲ್ ರಾಠೋಡ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕ್ರೈಂ ಪಿಎಸ್ಐ ಚಂದ್ರಾಮಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜನಶೆಟ್ಟಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಓರಿಯಂಟ್ ಕಂಪೆನಿ ಅಧಿಕಾರಿ ನಿಂಗನಗೌಡ ಬೆಳ್ಳಿ, ಸಮಿತಿ ಗೌರವಾಧ್ಯಕ್ಷ ಭೀಮಸಿಂಗ್ ಚವ್ಹಾಣ, ಅಧ್ಯಕ್ಷ ವಿನೋದ ಪವಾರ, ಮುಖಂಡರಾದ ಬೋರು ರಾಥೋಡ, ಚಂದು ಜಾಧವ, ಸುನಿಲ್ ರಾಠೋಡ, ವಿಜಯ ಚವ್ಹಾಣ, ಸುರೇಶ ರಾಠೋಡ, ರಮೇಶ್ ಕಾರ್ಬಾರಿ, ಕಿಶನ್ ನಾಯಕ, ಅಶೋಕ್ ನಾಯಕ, ಲಕ್ಷ್ಮಣ ನಾಯಕ, ಸುಬ್ಬು ನಾಯಕ, ಮೋತಿಲಾಲ್ ನಾಯಕ, ದೇವದಾಸ್ ನಾಯಕ, ಚಂದು ನಾಯಕ, ರವೀಂದ್ರ ನಾಯಕ, ಶಂಕರ್ ನಾಯಕ ಚೌಕಿ ತಾಂಡಾ, ಕುಮಾರ್ ಬಾಬು ನಾಯಕ್ ಮೊಗಲಿ ತಾಂಡಾ, ಧನರಾಜ್ ಯಾದವ್, ಪ್ರವೀಣ್ ಪವಾರ, ದೇವದಾಸ್ ಚವ್ಹಾಣ, ರವಿ ಜಾಧವ, ತಿರುಪತಿ ಚವ್ಹಾಣ, ಶ್ರೀಕಾಂತ್ ರಾಠೋಡ, ಪ್ರತಾಪ್ ಚವ್ಹಾಣ, ವಿಶ್ವನಾಥ ಜಾನು ರಾಠೋಡ, ಕುಮಾರ್ ಚವ್ಹಾಣ, ಧರ್ಮ ಜಾಧವ, ಚಂದರ್ ಚವ್ಹಾಣ, ಶಂಕರ್ ಚವ್ಹಾಣ, ವಿಜಯ ಪವಾರ, ರಾಮ್ ಡಿಗು ಚವ್ಹಾಣ, ತಿರುಪತಿ ರಾಠೋಡ, ಗಣೇಶ್ ಚವ್ಹಾಣ, ಮಹದೇವ ರಾಠೋಡ, ಆನಂದ್ ಜಾಧವ, ಆಕಾಶ್ ಚವ್ಹಾಣ ಸೇರಿದಂತೆ ತಾಂಡಾದ ನಾಯಕ್ ಕಾರ್ಬಾರಿ, ಡಾವ್ ಸಾನ್, ಹಾಸಬಿ ನಾಸಾಬಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಉದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಗದೀಶ್ ಚವ್ಹಾಣ ನಿರೂಪಿಸಿದರು, ಜಗದೀಶ್ ಪವಾರ ವಂದಿಸಿದರು. ನಂತರ ಬಂಜಾರ ಜಾನಕಾರ್ ರಾಜ್ ಪವಾರ್ ಬಳಗದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.