ಸೂಗೂರು(ಏನ್) ಶ್ರೀ ಬೋಜಲಿಂಗೇಶ್ವರ ಶಾಲೆಯ ಮಕ್ಕಳು ವಾಲಿಬಾಲ್ ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಗೂರು(ಏನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ವಾಲಿಬಾಲ್ ನಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಸತತವಾಗಿ ಎರಡನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಚಿತ್ತಾಪುರ ತಾಲೂಕಿಗೆ ಕೀರ್ತಿ ತಂದಿದಾರೆ ಎಂದು ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾರ ಪೂಜ್ಯ ಶ್ರೀ ಹಿರಗಪ್ಪ ತಾತನವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಹಲಕಟ್ಟಿ ಕ್ಲಸ್ಟರ್ ಸಿಆರಸಿ ಹೀರಾಬಾಯಿ, ಮಠದ ಸದ್ಭಕ್ತರಾದ ಸಿದ್ದುಗೌಡ ಕುರಾಳ, ರಾಜು ಚಿಗರಳ್ಳಿ, ಸಾಬಣ್ಣ ಮಲ್ಕಪನಳ್ಳಿ, ಸಿದ್ದಪ್ಪ ಮಲ್ಕಪ್ಪನಳ್ಳಿ, ಬಂದಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ರೆಡ್ಡಿ, ದೈಹಿಕ ಶಿಕ್ಷಕ ಕಾಳಿದಾಸ ಕಲ್ಯಾಣೆ, ಮುಖ್ಯ ಗುರು ಶರಣಬಸಪ್ಪ ಕುಂಬಾರ, ಸಹ ಶಿಕ್ಷಕರಾದ ಬಸವರಾಜ ಕುಂಬಾರ, ನಾಗೇಶ ಪಾಂಚಾಳ, ಶರಣು ಪೂಜಾರಿ, ಸಿಂಧು, ಸವಿತಾ, ಯಶೋಧ, ಜಯಶ್ರೀ ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

