Oplus_0

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಕೃಷಿಕ ಸಮಾಜ ಮನವಿ | ಕಲಬುರಗಿ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಿ: ಡಾ.ಸಿದ್ರಾಮಪ್ಪ ಪಾಟೀಲ ಮನವಿ 

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಹೋದ ವರ್ಷ ಅತಿವೃಷ್ಟಿಯಿಮದ ಬೆಳೆಹಾನಿಯಾಗಿದ್ದು ಒಂದು ತರಹದ ಹಸಿ ಬರಗಾಲದಿಂದ ರೈತ ಬೆಳೆ ಹಾನಿಯಿಂದ ತೊಂದರೆ ಅನುಭವಿಸಿದ, ಈ ವರ್ಷ ಸಕಾಲಕ್ಕೆ ವಾಡಿಕೆಯಂತೆ ಇಲ್ಲಿಯವರೆಗೆ ಮಳೆ ಬರದೆ ಇರುವುದರಿಂದ ಮುಂಗಾರು ಬಿತ್ತನೆಗೆ ಕುಂಠಿತವಾಗಿದೆ. ಇದು ಒಂದು ತರಹದ ಒಣಬರಗಾಲದಂತೆ ಬಾಸವಾಗುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಾ.ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಅವರು ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಲಬುರಗಿ ಜಿಲ್ಲೆಗೆ ಶನಿವಾರ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಧಂಗಾಪೂರ, ಅಲ್ಪಾವಧಿ ಬೆಳೆಯಾದ ಹೆಸರು, ಉದ್ದು ಬಿತ್ತುವ ಸಮಯ ಮೀರಿದೆ. ಇನ್ನು ತೊಗರಿ, ಸೋಯಾ, ಹತ್ತಿ ಇನ್ನಿತರೆ ಬೆಳೆ ಬಿತ್ತನೆಗೆ ಮುಂದೆ ಬಿಳುವ ಮಳೆ ಮೇಲೆ ಅವಲಂಬಿತವಾಗಿದೆ. ಮಳೆ ಎಷ್ಟರ ಮಟ್ಟಿಗೆ ಬರಬಹುದೆಂಬ ಬರವಸೆ ಇಲ್ಲದಾಗಿದೆ ಎಂದು ತಿಳಿಸಿದರು.

ಹೋದ ವರ್ಷದಂತೆ ಈ ವರ್ಷವು ಸಹ ರೈತ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಹೋದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತನಿಗೆ NDRF ನಂತೆ ರಾಜ್ಯ ಸರ್ಕಾರ ಸಹ ಪರಿಹಾರ ನೀಡಿತ್ತಾದರೂ ಬಹಳಷ್ಟು ರೈತರಿಗೆ ಸರಿಯಾದ ಪರಿಹಾರದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಸರ್ಕಾರದ ಗಮನಕ್ಕೆ ತರಲಾಗಿತ್ತು. ಇನ್ನು ಬೆಳೆವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಬೆಳೆ ಪರಿಹಾರ ಸಹ ವ್ಯತ್ಯಾಸದಿಂದ ದೊರಕಿದೆ ಇಲ್ಲಿಯವರೆಗೆ ಕೊನೆ ಹಂತದ ಪರಿಹಾರ ಸಹ ಸಿಗದಿರುವುದರಿಂದ ರೈತರು ಅಲ್ಲಲ್ಲಿ ಮಿಂಚಿನ ಪ್ರತಿಭಟನೆ ಮಾಡುತ್ತಿದ್ದಾರೆ. ನ್ಯಾಯಬದ್ಧವಾಗಿ ದೊರಕುವುದಕ್ಕೂ ರೈತರು ಹೋರಾಟ ಮಾಡುವಂತಾಗಿದೆ. ಇದರಿಂದ ಈ ವರ್ಷ ಬೆಳೆ ವಿಮೆ ಮಾಡಿಸಲು ರೈತರು ಅನುಮಾನ ಪಡುವಂತಾಗಿದೆ ಎಂದು ಹೇಳಿದರು.

ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ತಾವು ವರದಿ ಸಲ್ಲಿಸುವ ಜೊತೆ ರೈತನ ಹಿತದೃಷ್ಟಿಯಿಂದ ರೈತನಿಗೆ ಅತ್ಮಸ್ಥೆರ್ಯ ನೀಡಲು ಕಳೆದ ಅವಧಿಯಲ್ಲಿನ ಅಂತಿಮ ಬೆಳೆವಿಮೆ ಪರಿಹಾರ ಕೂಡಲೇ ಬಿಡುಗಡೆ ಮತ್ತು ಸಹಕಾರ ರಾಷ್ಟ್ರೀಕೃತ ಬ್ಯಾಂಕಿನ ಬೆಳೆ ಸಾಲಮನ್ನಾ ಮಾಡುವ ಬಗ್ಗೆ, ಮತ್ತು ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಲು ಹಾಗೂ ಉದ್ಯೋಗ ಖಾತರಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಕೆಲಸ ಪ್ರಾರಂಭಿಸಲು ಸರ್ಕಾರದ ಗಮನಕ್ಕೆ ತರಲು ಈ ಮೂಲಕ ಜಿಲ್ಲೆಯ ರೈತ ಸಮುದಾಯದ ಪರವಾಗಿ ಕೃಷಿ ಸಮಾಜದಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ತಮ್ಮ ವರದಿಯಿಂದ ಸರ್ಕಾರ ಸ್ಪಂದಿಸಬಹುದೆಂಬ ನಂಬಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕೃಷಿಕ ಸಮಾಜದ ಉಪಾಧ್ಯಕ್ಷ ಲಿಂಗಯ್ಯಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾಗರೆಡ್ಡಿ ಗೋಪಸೇನ್, ಖಜಾಂಚಿ ಚಿತ್ತರಂಜನ್ ಪಾಟೀಲ, ಕಲಬುರಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಿತ್ರಶೇಖರ್ ಪರಶಿವಪ್ಪಗೋಳ, ಜಂಟಿ ಕೃಷಿ ನಿರ್ದೇಶಕ ಹಾಗೂ ಪದನಿಮಿತ್ತ ಕಾರ್ಯದರ್ಶಿ ಸಮದ್ ಪಟೇಲ್ ಸೇರಿದಂತೆ ಜಿಲ್ಲಾ ಕೃಷಿಕ ಸಮಾಜದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!