Oplus_0

ಅದಾನಿ ಸಿಮೆಂಟ್ ಕಂಪನಿಯ ಅಧಿಕಾರಿಗೆ ಮನವಿ | ವಾಡಿ ಪಟ್ಟಣದ ಜನರ ಅಗತ್ಯತೆ, ಬೇಸಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ವಾಡಿ ಪಟ್ಟಣ ಅಭಿವೃದ್ಧಿ ಮತ್ತು ನಾಗರಿಕರ ಕಲ್ಯಾಣ ಸಮಿತಿ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಜನರ ತುರ್ತು ಅಗತ್ಯಗಳನ್ನು ಪೂರೈಸಬೇಕು ಹಾಗೂ ವಿಶೇಷವಾಗಿ ಪ್ರಸ್ತುತ ಬೇಸಿಗೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಾಡಿ ಪಟ್ಟಣ ಅಭಿವೃದ್ಧಿ ಮತ್ತು ನಾಗರಿಕರ ಕಲ್ಯಾಣ ಸಮಿತಿಯ ಮುಖಂಡರು ಶನಿವಾರ ಅದಾನಿ ಎಸಿಸಿ ಸಿಮೆಂಟ್ ಕಂಪನಿಯ ಹೆಚ್.ಆರ್ ಮುಖ್ಯಸ್ಥ ಯಡ್ಡು ಕೋಟೇಶ್ವರ್ ರಾವ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈಲ್ವೆ ಗೇಟ್ ಬಳಿ ಜನರು ಬಹಳ ಸಮಯ ಬಿಸಿಯಲ್ಲಿ ಕಾಯಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಆರಾಮವಾಗಿ ಕಾಯಲು ಗ್ರೀನ್ ಶೇಡ್/ನೆಟ್ (ಶೆಡ್) ಇರುವ ನೆರಳಿನ ವ್ಯವಸ್ಥೆಯನ್ನು ಅಳವಡಿಸಬೇಕು. ಧೂಳು ಮತ್ತು ಬಿಸಿಯ ತೀವ್ರತೆಯಿಂದಾಗಿ, ಯಾದಗಿರಿ ಮುಖ್ಯ ರಸ್ತೆಯಲ್ಲಿ ನಿಯಮಿತವಾಗಿ ನೀರು ಸಿಂಪಡಿಸುವುದು ಅಗತ್ಯವಾಗಿದೆ. ಇದು ಧೂಳು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ತಾಪಮಾನವನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.

ಬೇಸಿಗೆಯಲ್ಲಿ ವಾಡಿಯಲ್ಲಿ ತಾಪಮಾನ ತುಂಬಾ ಹೆಚ್ಚಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಣ್ಣನೆಯ ಕುಡಿಯುವ ನೀರಿನ ಕೇಂದ್ರಗಳನ್ನು (ಹಟ್/ಪಾಯಿಂಟ್) ಸ್ಥಾಪಿಸಬೇಕು, ವಾಡಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಬ್ಬಿಣದ ವಸ್ತವಿನಿಂದ ಬಸ್ ತಂಗುದಾಣ ವ್ಯವಸ್ಥೆ ಮಾಡಬೇಕು, ನವೀನ್ ಪೆಟ್ರೋಲ್ ಪಂಪ ಹತ್ತಿರ ನಿರ್ಮಾಣವಾಗಿರುವ ವಸತಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಎಸಿಸಿ ಹಳೆಯ ಕಾರ್ಖಾನೆ ಗೇಟ್‌ನಿಂದ ನವೀನ್ ಪೆಟ್ರೋಲ್ ಪಂಪ್ ತನಕ ಸಿಸಿ ರಸ್ತೆ ನಿರ್ಮಿಸಬೇಕು, ಸಾರ್ವಜನಿಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಸರಿಯಾದ ರಸ್ತೆ ಮಧ್ಯ ಬೀದಿ ದೀಪಗಳನ್ನು ಅಳವಡಿಸಬೇಕು.

ಈ ಸಂದರ್ಭದಲ್ಲಿ ವಾಡಿ ಪಟ್ಟಣ ಅಭಿವೃದ್ಧಿ ಮತ್ತು ನಾಗರಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಅಮ್ಮತ್ ಕೋಮ್ಟೆ, ಪ್ರಧಾನ ಕಾರ್ಯದರ್ಶಿ ಶೈಖ್ ಅಲ್ತಾಫ್ ಸೌದಾಗರ್, ಉಪಾಧ್ಯಕ್ಷ ನಾಗೇಂದ್ರ ಜೈ ಗಂಗಾ, ಪುರಸಭೆ ಮಾಜಿ ಸದಸ್ಯ ಪೃಥ್ವಿರಾಜ್ ಸೂರ್ಯವಂಶಿ, ಕೃಷ್ಣ, ಸಿದ್ದು ಪೂಜಾರಿ, ಸಂಜಯ ಠಾಣೆದಾರ, ರಾಜು ವಾಲಿಯ್, ರಾಹುಲ್ ಮೇನಗಾರ, ಬಸವರಾಜ ತುಮಕೂರಕರ್, ವಿಶಾಲ ನಾಯಕ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!