ಭಾಗೋಡಿ ಗ್ರಾಮದಲ್ಲಿ ಏ.26 ರಂದು ಬಸವ ಜಯಂತೋತ್ಸವ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗ್ರಾಮ ಘಟಕದ ವತಿಯಿಂದ ಶ್ರೀ ಶಾಂತಲಿಂಗೇಶ್ವರ ಮಠದಲ್ಲಿ ಏ.26 ರಂದು ಬೆಳಿಗ್ಗೆ 11 ಗಂಟೆಗೆ ಬಸವ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ತಾಲೂಕು ಕಾರ್ಯದರ್ಶಿ ಬಸವರಾಜ ಪಾಟೀಲ ದಳಪತಿ ತಿಳಿಸಿದ್ದಾರೆ.
ಖಾಸಾಮಠ ಗುರುಮಿಠಕಲ್ – ಭಾಗೋಡಿ ಶ್ರೀ ಶಾಂತವೀರ ಮುರುಘರಾಜೇಮದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಉದ್ಘಾಟಿಸುವರು, ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಯುವ ಲೇಖಕಿ ಪೂಜಾ ಆರ್ ಭಂಕಲಗಿ ವಿಶೇಷ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲಕುಮಾರ ದೊಡ್ಡಮನಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟಗಾರರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಸಿ ಭಂಕಲಗಿ, ಬಸವ ಜಯಂತೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಬೇಳಗುಂಪಾ, ಕೋಲಿ ಸಮಾಜದ ಹಿರಿಯ ಮುಖಂಡ ರಾಜೇಂದ್ರ ಅರಣಕಲ್, ಮುಸ್ಲಿಂ ಮುಖಂಡ ಸಿಲಾರ್ ಕಲಗುರ್ತಿ, ಕಲಾವಿದ ಮುತ್ತಣ್ಣ ಭಾಗೋಡಿ, ಕುರುಬ ಸಮಾಜದ ಮುಖಂಡ ಸಾಬಣ್ಣ ಶೇರಿ, ದಲಿತ ಮುಖಂಡ ಶಂಭುಲಿಂಗ ಏರಿ, ಮಹಾಸಭಾದ ಗ್ರಾಮ ಘಟಕದ ಅಧ್ಯಕ್ಷ ಶಿವಕುಮಾರ ಕಲಬುರಗಿ, ಬಸವ ಜಯಂತೋತ್ಸವ ಸಮಿತಿ ಅಧ್ಯಕ್ಷ ಪದ್ಮಣಗೌಡ ಪಾಟೀಲ ಆಗಮಿಸಲಿದ್ದು, ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.

