ವಾಡಿ ಬಿಜೆಪಿ ಕಚೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸತ್ಯದ ಮಾರ್ಗದಲ್ಲಿ ನಡೆಯುವುದೇ ಮಾನವ ಧರ್ಮ ಎಂದು ರೇಣುಕಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಎಂದರು.

ಪಂಚಾಚಾರ್ಯರಲ್ಲಿ ಬಹಳ ಪ್ರಮುಖವಾದ ಆಚಾರ್ಯರಾಗಿದ್ದ ಇವರು ಪ್ರಭಾವಶಾಲಿಯಾದ ರಂಭಾಪುರಿ ಪೀಠದ ಸಂಸ್ಥಾಪಕರಾಗಿದ್ದರು. ಸತ್ಯದ ಮಾರ್ಗ ದೊಂದಿಗೆ, ಸಾಮರಸ್ಯದಿಂದ ಸಮಾಜ ನಡೆಯುವುದಕ್ಕೆ ಅನುಸರಿಸಬೇಕಾದ ಅಂಶಗಳನ್ನು ಧಾರೆಯೆರಿದಿದ್ದಾರೆ ಎಂದು ಹೇಳಿದರು.

ರೇಣುಕಾಚಾರ್ಯರರ ಸರ್ವ ಶ್ರೇಷ್ಠ, ಮೌಲಿಕದ ಗ್ರಂಥವಾದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ದಾಂತದ ಬೋಧನೆ, ಮಾನವಕುಲ ದೈವತ್ವದೆಡೆಗೆ ಸಾಗಲು ದಾರಿ ದೀಪವಾಗಿದೆ. ಸಮಾಜದಲ್ಲಿನ ಜಾತೀಯತೆ, ಮೂಢ ನಂಬಿಕೆಗಳನ್ನು ಹೋಗಲಾಡಿಸಿ, ಸಮಾನತೆಯನ್ನು ಎತ್ತಿಹಿಡಿದು, ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಪಾತ್ರರಾದವರು ಅವರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶ್ಯಾ ಜೀರೊಳ್ಳಿ, ರವೀಂದ್ರ ನಾಯಕ,  ಕಾಶಿನಾಥ ಶೆಟಗಾರ, ರವಿ ಸಿಂದಗಿ, ಶಿವಕುಮಾರ ವಡ್ಡಡಗಿ, ಕುಮಾರ ಜಾಧವ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಸಿದ್ದಣ್ಣ ಸೊಡ್ಡೆ, ಗುಂಡುಗೌಡ ಚಾಮನೂರ, ನಾಗರಾಜ ಹೂಗಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!