ಪ್ರಜಾ ಸೌಧದ ಆವರಣದಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ | ರೇಣುಕಾಚಾರ್ಯರು ಯುಗಪುರುಷರು: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವೀರಶೈವ ಪಂಚಪೀಠಗಳಲ್ಲೇ ಪ್ರಥಮವಾದ ರಂಭಾಪುರಿ ಪೀಠದ ಸಂಸ್ಥಾಪಕರಾದ ರೇಣುಕಾಚಾರ್ಯರು ಯುಗಪುರುಷರು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪ್ರಜಾಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಅಗಸ್ಯ ಮುನಿಗಳಿಗೆ ಸಿದ್ಧಾಂತ ಶಿಖಾಮಣಿಯನ್ನು ಬೋಧಿಸುವ ಮೂಲಕ ಅಧ್ಯಾತ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು. ರೇಣುಕಾಚಾರ್ಯರ ತತ್ವಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಸಮಸ್ತ ಮಾನವಕುಲದ ಕಲ್ಯಾಣಕ್ಕೆ ಪೂರಕವಾಗಿವೆ ಎಂದು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಮಲ್ಲರೆಡ್ಡಿ ಗೋಪಸೇನ್, ಪ್ರಸಾದ ಅವಂಟಿ, ಅನಿಲಕುಮಾರ ವಡ್ಡಡಗಿ, ಕೋಟೇಶ್ವರ ರೇಷ್ಮಿ, ಮಂಜುನಾಥ ಪೊಲೀಸ್ ಪಾಟೀಲ್, ಶ್ರೀನಿವಾಸರೆಡ್ಡಿ ಪಾಲಪ್, ಶಾಂತಕುಮಾರ ಹತ್ತಿ, ಬಸವರಾಜ ಹೂಗಾರ, ರಮೇಶ್ ಬೊಮ್ಮನಳ್ಳಿ, ಅಶೋಕ ನಿಪ್ಪಾಣಿ, ನಾಗರೆಡ್ಡಿ ಗೋಪಸೇನ್, ಮಲ್ಲಿಕಾರ್ಜುನ ರೆಡ್ಡಿ ಇಜಾರ, ಶಿವರಾಜ ಪಾಳೆದ್, ಅಂಬರೀಶ್ ಸುಲೇಗಾಂವ್, ಬಸವರಾಜ ಕಾಳಗಿ, ಬಸವರಾಜ ಸಂಕನೂರ್, ಮಲ್ಲಿಕಾರ್ಜುನ ಪೂಜಾರಿ ದಂಡಗುಂಡ, ಮಹೇಶ ಬೆಟಗೇರಿ, ಮಲ್ಲು ಇಂದೂರ್, ಉಮೇಶ ಸ್ವಾಮಿ, ಶರಣಗೌಡ ಸೂಲಹಳ್ಳಿ, ಮಹಾದೇವ ಅಂಗಡಿ, ರಮೇಶ ಕಾಳನೂರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಶಿರಸ್ತೇದಾರ ಸುನೀಲಕುಮಾರ ಯನಗುಂಟಿ, ಕಚೇರಿಯ ಸಿಬ್ಬಂದಿಗಳಾದ ವಿಠಲ್ ಬಂಡಗಾರ, ಮೈನೊದ್ದೀನ್, ದುರ್ಗಪ್ಪ ಹಾಗೂ ಗ್ರಾಮಸೇವಕ ಮಂಜುನಾಥ ಕಾಶಿ ಸೇರಿದಂತೆ ಇತರರು ಇದ್ದರು.

