Oplus_131072

ವಾಡಿ ಪುರಸಭೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ನಿರ್ದೇಶಕರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ವಾಡಿ ಪುರಸಭೆ ಕಾರ್ಯಾಲಯದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ ಹಾಗೂ ವಾಡಿ ವಲಯ ಅಧ್ಯಕ್ಷ ಸಿದ್ದು ಪೂಜಾರಿ ಅವರು ಬೆಂಗಳೂರು ಪೌರಾಡಳಿತ ಇಲಾಖೆಯ ನಿರ್ದೇಶಕರಿಗೆ ಗುರುವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ವಾಡಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.  ಇವರು ಸದರಿ ಕಾರ್ಯಾಲಯದಲ್ಲಿ ಮನೆಯ ಖಾತಾ ನಕಲು, ಮೋಟೆಷನ್ ಹಾಗೂ ಬಿಲ್ ಕಲೆಟ್ಟರ್ ಗಳಾಗಿ ಪಟ್ಟಣದಲ್ಲಿ ಮೀತಿ ಮೀರಿ ಅವ್ಯವಹಾರ ಮಾಡುತ್ತಿದ್ದಾರೆ, ಖಾತಾ ನಕಲು ಮಾಡಿಸಲು ಸರಕಾರ ಶುಲ್ಕ ಬಿಟ್ಟು ಜನರಿಂದ ಅತ್ಯಧಿಕ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೆ ಯಾವುದೇ ದಾಖಲೆ ಪರೀಶೀಲನೆ ಮಾಡದೇ ತ್ವರಿತವಾಗಿ ಕೆಲಸ ಮಾಡಿಕೊಡುತ್ತಾರೆ. ಅದೇ ಕೇಳಿದಷ್ಟು ಹಣ ನೀಡದೆ ಹೋದರೆ ದಿನ ನಿತ್ಯ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಜನರನ್ನು ಅಲೆದಾಡಿಸುತ್ತಾರೆ ಹಾಗೂ ಅರ್ಜಿಗಳು ತಿರಸ್ಕರಿಸುತ್ತಾರೆ ಇದರಿಂದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪುರಸಭೆ ಕಚೇರಿಯಲ್ಲಿ ಮಿತಿಮೀರಿ ಅವ್ಯವಹಾರವು ನಡೆಯುತ್ತಿದ್ದು ಇವರ ವಿರುದ್ಧ ಶೀಘ್ರದಲ್ಲಿ ಇಲಾಖೆ ವಿಚಾರಣೆ ನಡೆಸಿ, ಹಲವಾರು ವರ್ಷಗಳಿಂದ ಇಲ್ಲಿಯೇ ಬೇರು ಬಿಟ್ಟಿದ್ದ ಮಲ್ಲಿಕಾರ್ಜುನ ಹಾರಕೂಡ, ಲತಾಮಣಿ, ವೀರುಪಾಕ್ಷಿ, ಮಲ್ಲಿಕಾರ್ಜುನ, ಈಶ್ವರ, ಬಸವರಾಜ, ಶ್ರೀಮಂತ ಧಮ್ಮನಸೂರ್, ವಿಶ್ವನಾಥ ಭಾಗೋಡಿ, ಪ್ರಭು ಇವರನ್ನು ಕೂಡಲೇ ವರ್ಗಾವಣೆ ಮಾಡಿ ಸ್ವಚ್ಛ ಆಡಳಿತಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ನಮ್ಮ ಕರ್ನಾಟಕ ಸೇನೆ ಬೀದಿ ಇಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ಸಂಘಟನಾ ಸಂಚಾಲಕ ಅಂಬರೀಷ್ ಮಾಳಗಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!