ವಾಡಿಯಲ್ಲಿ ಜಿಲ್ಲಾಧಿಕಾರಿಗಳು ಜನಸಂಪರ್ಕ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಬಿಜೆಪಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ತೀವ್ರತರದ ಸಮಸ್ಯೆಗಳನ್ನು ಪರಿಹರಸಿ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಪತ್ರ ಬರೆದು ಆಗ್ರಹಿಸಿದ್ದಾರೆ.
ಸುಮಾರು ಐವತ್ತು ಸಾವಿರ ಜನಸಂಖ್ಯೆಯ, ವಿಶ್ವದ ಬೃಹತ್ ಸಿಮೆಂಟ್ ಕಂಪನಿಯ ಜೊತೆಗೆ ಬೃಹತ್ ರೈಲ್ವೆ ನಿಲ್ದಾಣ ಹೊಂದಿರುವ ವಾಡಿ ಪಟ್ಟಣವು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಇಲ್ಲಿಯ ಜನಸಾಮಾನ್ಯರು ಮೂಲಭೂತ ಸೌಕರ್ಯಗಳಿಗಾಗಿ ಪರಿತಪಿಸುವ ಪರಿಪಾಠ ಮಾತ್ರ ನಿರಂತರವಾಗಿದೆ ಎಂದು ತಿಳಿಸಿದ್ದಾರೆ.
ಭೂಮಿ-ಆಸ್ತಿ ದಾಖಲೆ ಪತ್ರಗಳ ಸಮಸ್ಯೆ, ರಸ್ತೆ, ನೀರು ಸರಬರಾಜಿನ, ಪುರಸಭೆಯಲ್ಲಿನ ಭ್ರಷ್ಟಾಚಾರದ ಬಗ್ಗೆ, ಸರ್ಕಾರಿ ಆಸ್ಪತ್ರೆ, ಶಾಲೆಗಳಲ್ಲಿನ, ವಿದ್ಯುತ್, ಬಸ್ಸುಗಳು ಹಾಗೂ ಬಸ್ ನಿಲ್ದಾಣ, ಸ್ವಚ್ಚತೆ ಬಗ್ಗೆ, ಕಾನೂನು ಸುವ್ಯವಸ್ಥೆ ಬಗ್ಗೆ, ಅಸಮರ್ಪಕ ಚರಂಡಿಗಳು, ಶೌಚಾಲಯಗಳು ಸೇರಿದಂತೆ ಅನೇಕ ಸಮಸ್ಯೆಗಳ ಆಗಾರವಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಾನುಸಾರವಾಗಿ ಜೊತೆಗೆ ತಮಗೂ ಪಟ್ಟಣದ ಸಂಘಟನೆಗಳು, ನಾವು ಹೋರಾಟದ, ಪ್ರತಿಭಟನೆಯ ಮೂಲಕ ಸಾಲು ಸಾಲು ಮನವಿ ಪತ್ರ ಸಲ್ಲಿಸಿರುತ್ತೇವೆ. ಆದರೂ ಜನರ ಗೋಳಾಟ ನಿಂತಿಲ್ಲ, ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯಿಂದ ಇಲ್ಲಿನ ಸಮಸ್ಯೆಗಳ ಜೀವಂತಿಕೆಯನ್ನು ಅರಿತು ಪರಿಹರಿಸಲು ಆದಷ್ಟು ಬೇಗ ಜನಸಂಪರ್ಕ ಸಭೆ ಕೈಗೊಂಡು ಪಟ್ಟಣದ ನಾಗರಿಕರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದ್ದಾರೆ.

