ಜಿನಕೇರಾ ತಾಂಡಾ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರ ಸಾವು 

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ತಾಲೂಕಿನ ಜಿನಕೇರಾ ತಾಂಡದಲ್ಲಿ ಸೋಮವಾರ ಸುರಿದ ರಣಚಂಡಿ ಮಳೆಗೆ ಭೀಕರ ಸಿಡಿಲಿಗೆ ಒಂದೇ ಕುಟುಂಬದ ನಾಲ್ವರು ಸಾವು ಸಂಭವಿಸಿದ ಘಟನೆ ನಡೆದಿದೆ.

ಜೋರಾಗಿ ಮಳೆ ಬೀಸುವಾಗ ಈರುಳ್ಳಿ ಸಸಿ ನಾಟಿ ಮಾಡುವ ಸಂದರ್ಭದಲ್ಲಿ ಮಳೆಯಿಂದ ಆಶ್ರಯ ಪಡೆಯಲು ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಆಶ್ರಯ ಪಡೆಯುವಾಗ ಸಿಡಿಲು ಹೊಡೆದು ತಾಂಡಾದ ಕಿಶನ್ ನಾಮಣ್ಣ ಜಾದವ್ 33, ಚನ್ನಪ್ಪ ನಾಮಣ್ಣ ಜಾದವ್ 24 ಸೋನಾಭಾಯಿ ರಾಠೋಡ 30, ನಿಂಗಪ್ಪ ಜಾದವ್ 18 ಮೃತಪಟ್ಟ ದುರ್ದೈವಿಗಳು. ಅದೇ ರೀತಿ ತಾಲೂಕಿನ ಹೊಸಳ್ಳಿ ಆರ್ ಹತ್ತಿರ 25 ಹೆಚ್ಚು ಕುರಿಗಳು ಸಿಡಿಲು ಹೊಡೆತಕ್ಕೆ ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Spread the love

Leave a Reply

Your email address will not be published. Required fields are marked *

error: Content is protected !!