Oplus_0

10 ನೇ ವರ್ಷದ ಡೋಣಗಾಂವ-ಮೈಲಾಪುರ ಪಾದಯಾತ್ರೆಗೆ ಚಾಲನೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪ್ರತಿ ವರ್ಷವಂತೆ ಈ ವರ್ಷವೂ ಕೂಡ ಲೋಕ ಕಲ್ಯಾಣಕ್ಕಾಗಿ 10 ನೇ ವರ್ಷದ ಡೋಣಗಾಂವ ಗ್ರಾಮದಿಂದ ಮೈಲಾಪುರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಶರಣು ಡೋಣಗಾಂವ ತಿಳಿಸಿದ್ದಾರೆ.

ಚಿತ್ತಾಪುರ ತಾಲೂಕ ಡೋಣಗಾಂವ ಗ್ರಾಮದಿಂದ ಮಂಗಳವಾರ ಬೆಳಗ್ಗೆ 6 ಗಂಟೆಗೆ ಗ್ರಾಮದ ಮಲ್ಲಯ್ಯ ದೇವಸ್ಥಾನದಿಂದ ಪ್ರಾರಂಭವಾಗಿ ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಪಾದಯಾತ್ರೆಯಲ್ಲಿ ಬಂದ ಯಾತ್ರಿಕರಿಗೆ ವಸತಿ, ಪ್ರಸಾದ ವ್ಯವಸ್ಥೆ ಇರುತ್ತದೆ, ಮರಳಿ ಗ್ರಾಮಕ್ಕೆ ಬರುವುದಕ್ಕಾಗಿ ವಾಹನದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಶರಣು ಡೋಣಗಾಂವ, ಮಲ್ಲಿಕಾರ್ಜುನ್ ಹೊನ್ನಪುರ, ಕಾಶಪ್ಪ ಹಲಕಟ್ಟಿ, ಶಿವಯ್ಯ ಸ್ವಾಮಿ, ಅಂಬರೀಷ್ ಬಾನರ್, ಸಿದ್ದು ಮೆಂಗನೂರ್, ಶಿವರಾಜ್ ಬಾನರ್, ಶ್ರೀಶೈಲ್ ಪೂಜಾರಿ, ಮಂಜುನಾಥ್ ಚೂರಿ, ಶರಣಪ್ಪ ಪೂಜಾರಿ, ಈಶಪ್ಪ ಮುತ್ತಗಿ, ದೇವಪ್ಪ ನಂಜಳ್ಳಿ, ಜಟ್ಟೆಪ್ಪ ಪೂಜಾರಿ, ಹನುಮಂತ ಹಲ್ಕಟ್ಟಿ, ಶರಣಪ್ಪ ಮನೆಗರ್, ಮಂಜುನಾಥ್ ತಳವಾರ್, ಕಾಶಪ್ಪ ಜಿಂಗಲ್, ಪಾದಯಾತ್ರೆಯಲ್ಲಿ ನೂರಾರು ಜನ ಭಕ್ತರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!