Oplus_0

ಚಿತ್ತಾಪುರ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳು ದಿಢೀರ್ ಭೇಟಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಚಿತ್ತಾಪುರ ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ, ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ ಮತ್ತು ಇತರೆ ಅಧಿಕಾರಗಳ ತಂಡದಿಂದ ಮಂಗಳವಾರ ಧಿಡೀರ್ ಬೇಟಿ ನೀಡಿ ಮಾಡಿ ತಪಾಸಣೆ ಕೈಗೊಂಡರು.

ಮೊದಲಿಗೆ ಕೃಷಿ ಪರಿಕರ ಮಾರಾಟ ಮಳಿಗೆಗಳಾದ ನಮ್ಮ ಗೋಮ್ಮೋರ ಸೆಂಟರ್ ನ ಮಾರಾಟ ಮಳಿಗೆಗೆ ಭೇಟಿ ನೀಡಿ ಬಿಲ್ಲು ಪುಸ್ತಕ ಇತರೆ ದಾಖಾಲಾತಿಗಳನ್ನು ಪರೀಕ್ಷಿಸಿ ಗೋದಾಮು ವೀಕ್ಷಣೆ ಮಾಡಿ ಗೊಬ್ಬರದ ದಾಸ್ತಾನು ಪರಿಶೀಲಿಸಿ ರೈತರಿಗೆ ನಿಯಮಿತವಾಗಿ ಡಿಎಪಿ ಮತ್ತು ಇತರೇ ಗೊಬ್ಬರಗಳನ್ನು ವಿತರಿಸಲು ಸೂಚಿಸಿದರು ಮತ್ತು ನ್ಯಾನೊ ಡಿಎಪಿ ಮತ್ತು ನ್ಯಾನೊ ಯೂರಿಯಾ ಬಳಕೆ ಕುರಿತು ಮಾಹಿತಿ ನೀಡಿದರು.

ನಂತರ ವಿಶ್ವಗುರು ಟ್ರೇಡರ್ಸ್, ಮಹಾಲಕ್ಷ್ಮಿ ಅಗ್ರೂ ಸೆಂಟರ್‌ಗೆ ಭೇಟಿ ನೀಡಿ ಬಿಲ್ಲು ಪುಸ್ತಕ ಮತ್ತು ಇತರ ದಾಖಲಾತಿಗಳನ್ನು ಪರಿಶೀಲಿಸಲಾಗಿ ಮಹಾಲಕ್ಷ್ಮಿ ಅನ್ನೊ ಇವರು ಸರಿಯಾಗಿ ದಾಸ್ತಾನು ವಹಿ ನಿರ್ವಹಿಸದ ಬಾಬತ್ತು ಎಚ್ಚರಿಕೆ ನೋಟಿಸ್ ನೀಡಲಾಗಿದೆ, ನಂತರ ಟಿಎಪಿಸಿಎಂಎಸ್ ಕಾರ್ಯಾಲಯಕ್ಕೆ ಭೇಟಿ ನೀಡಿ ರೈತರು ಮತ್ತು ಟಿಎಪಿಸಿಎಂಎಸ್ ನ ಸದಸ್ಯರೊಂದಿಗೆ ಚರ್ಚಿಸಿ ಕಾರ್ಯದರ್ಶಿಗೆ ತರಾಟೆಗೆ ತೆಗೆದುಕೊಂಡರು. ರಸಗೊಬ್ಬರ ವಿತರಿಸುವಾಗ ರೈತರಿಗೆ ಕಡ್ಡಾಯವಾಗಿ ರಶೀಧಿಯನ್ನು ನೀಡಬೇಕು ಮತ್ತು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!