ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ನಿಗಧಿತ ದರದಲ್ಲಿಯೇ ರಸಗೊಬ್ಬರ ಮಾರಾಟ: ರಾಮಲಿಂಗ ಬಾನರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ರೈತರಿಗೆ ರಸಗೊಬ್ಬರ ಮಾರಾಟ ನಿಗಧಿತ ದರದಲ್ಲಿಯೇ ನೀಡುತ್ತಿದ್ದಾರೆ ಎಂದು ಪ್ರಗತಿಪರ ರೈತ ರಾಮಲಿಂಗ ಬಾನರ್ ಹೊಸ್ಸುರ ತಿಳಿಸಿದ್ದಾರೆ.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ವಿವಿಧ ಸೌಲಭ್ಯ ನೀಡುವುದು ಕಳೆದ ಹತ್ತು ವರ್ಷಗಳಿಂದ ಸಂಪೂರ್ಣ ಬಂದ್ ಆಗಿತ್ತು. ಸದರಿ ಸಂಘದಿಂದ ಯಾವುದೇ ಸೌಲಭ್ಯ ರೈತರಿಗೆ ಸಿಕ್ಕಿಲ್ಲ. ಪ್ರಸ್ತುತ ಸದರಿ ಸಂಘದಿಂದ ಹೊಸ ಚಟುವಟಿಕೆ ಶುರು ಮಾಡಿ 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮುಂಗಾರು ಬಿತ್ತನೆ ಮಾಡಲು ರೈತರಿಗೆ ರಸಗೊಬ್ಬರವನ್ನು ಸರ್ಕಾರದ ನಿಗದಿತ ದರದಲ್ಲಿ ಮಾರಾಟ ಮಾಡಲು ಮುಂದಾಗಿದ್ದು ರೈತರಿಗೆ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಪಾರದರ್ಶಕವಾಗಿ ರಸಗೊಬ್ಬರ ಮಾರಾಟ ಮಾಡಲಾಗಿದ್ದರೂ ಸಹ ಕೆಲವರು ದುರುದ್ದೇಶದಿಂದ ಸದರಿ ಸಂಘದ ವಿರುದ್ಧ ಸುಳ್ಳು ಆರೋಪ ಹೋರಿಸಿ ಸಂಘದ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಸಿಗದಂತೆ ಮಾಡಲು ಅನವಶ್ಯಕ ದೂರು ನೀಡಿ ರಸಗೊಬ್ಬರ ಮಾರಾಟ ಬಂದ್ ಆಗುವಂತೆ ಮಾಡಿದ್ದಾರೆ. ರಸಗೊಬ್ಬರ ಸಿಗದ ಕಾರಣ ರೈತರು ರೂ,1,600 ರಿಂದ ರೂ.1,800 ರವರೆಗೆ ಬೆಲೆ ಕೊಟ್ಟು, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ರಸಗೊಬ್ಬರ ಸಿಗದ ಪ್ರಯುಕ್ತ ಬೇರೆ ಬೇರೆ ತಾಲೂಕುಗಳಿಗೆ ಹೋಗಿ ರಸಗೊಬ್ಬರ ಖರೀದಿಸಿ ತಂದು ಬಿತ್ತನೆ ಮಾಡುತ್ತಿದ್ದಾರೆ. ದೂರು ನೀಡಿದವರ ಪೈಕಿ ಈಗಾಗಲೇ ಕೆಲವರು ಸದರಿ ಸಂಘದಿಂದ ರಸಗೊಬ್ಬರ ಖರೀದಿಸಿದ್ದಾರೆ. ಯಾವುದೇ ಕಾರಣಕ್ಕೂ ಸುಳ್ಳು ದೂರು ಪರಿಗಣಿಸಬಾರದು. ಸಂಘದ ಹೆಸರಿಗೆ ಕಳಂಕ ಹಚ್ಚುವ ಮತ್ತು ಚಿತ್ತಾಪುರ ಕ್ಷೇತ್ರದ ಹೆಸರು ಹಾಳು ಮಾಡಿ ಜನಪ್ರತಿನಿದಿಗೆ ಕೆಟ್ಟ ಹೆಸರು ತರುವ ಕೆಟ್ಟ ಉದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ದೂರು ಪರಿಗಣಿಸದೆ ಸದರಿ ಸಂಘದಿಂದ ಮತ್ತೇ ರಸಗೊಬ್ಬರ ಮಾರಾಟಕ್ಕೆ ಅನುವು ಮಾಡಿಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದಯ್ಯ ಸ್ವಾಮಿ ಸಾತನೂರ, ಮಹಾದೇವ ಮುಗುಟಿ, ಬಸವರಾಜ ಜಕಾತಿ, ಮಲ್ಲಿಕಾರ್ಜುನ ಅಳ್ಳೋಳ್ಳಿ, ಸಾಬಣ್ಣ ಬಾನರ್, ಶಿವರಾಯ ಹೊಸಮನಿ, ಪೀರಪ್ಪ ಮೂಲಿಮನಿ, ಇಂದುಶೇಖರ ಬೆಂಕಿ, ರಾಮು ನಾಟೀಕಾರ, ಸಂತೋಷ ತಿರುಮಲ್, ವಸಂತ್ ಭಾವಿಕಟ್ಟಿ, ವೆಂಕಟರಮಣ ಬೇವಿನಗಿಡ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!