Oplus_0

ಚಿತ್ತಾಪುರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಿರಂಗಾ ಯಾತ್ರೆಯ ಬೃಹತ್ ಬೈಕ್ ರ‍್ಯಾಲಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಾರತೀಯ ಜನತಾ ಪಾರ್ಟಿ ಚಿತ್ತಾಪುರ ಮಂಡಲ ಯುವ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯ ಬೃಹತ್ ಬೈಕ್ ರ‍್ಯಾಲಿಗೆ ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಚಾಲನೆ ನೀಡಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಿಂದ ಪ್ರಾರಂಭವಾದ ತಿರಂಗಾ ಯಾತ್ರೆಯ ಬೈಕ್ ರ‍್ಯಾಲಿ ಚಿತ್ತಾವಲಿ ವೃತ್ತ, ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೆ ನಡೆಯಿತು. ರ‍್ಯಾಲಿಯಲ್ಲಿ ಬಿಜೆಪಿ ಯುವ ಕಾರ್ಯಕರ್ತರಿಂದ ಜೈ ಘೋಷಗಳು ಮೊಳಗಿದವು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ವಾಡಿ ಅಧ್ಯಕ್ಷ ವೀರಣ್ಣ ಯಾರಿ, ಯುವ ಅಧ್ಯಕ್ಷ ದೇವರಾಜ್ ತಳವಾರ, ಮುಖಂಡರಾದ ಭೀಮರೆಡ್ಡಿ ಕುರಾಳ, ಧರ್ಮಣ್ಣ ಇಟಗಿ, ಅಯ್ಯಪ್ಪ ರಾಮತೀರ್ಥ, ಸುರೇಶ್ ರಾಠೋಡ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಎಮ್ಮೆನೋರ,  ಶರಣು ಜ್ಯೋತಿ, ತಮ್ಮಣ್ಣ ಡಿಗ್ಗಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಾಂತಕುಮಾರ್ ಮಳಖೇಡ, ರಾಜು ದೊರೆ, ಪಂಕಜ್ ಗೌಡ್, ಮಹೇಶ್ ಬಾಳಿ, ಚಂದ್ರು ಉಟಗೂರ, ಶೈಲುಗೌಡ ದಿಗ್ಗಾಂವ, ಸಂಗಮೇಶ ಪಾಟೀಲ, ದಶರಥ ದೊಡ್ಡಮನಿ, ಪ್ರಸಾದ ಅವಂಟಿ, ಆನಂದ ಕಾಶಿ, ಬಸವರಾಜ ಹೂಗಾರ, ಶರಣು ಸಿದ್ರಾಮ ಗೋಳು, ಮಹ್ಮದ್ ಯುನುಸ್, ರಮೇಶ್ ಕಾಳನೂರ, ಶರಣು ತೊನಸನಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್ಐ ಮಂಜುನಾಥ ರೆಡ್ಡಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!