Oplus_0

ಜುಡೋ ಬಂಜಾರಾ ಫೌಂಡೇಶನ್ ಸಂಘಟನೆ ವಾಡಿ ಅಧ್ಯಕ್ಷರಾಗಿ ಯುವರಾಜ್ ರಾಠೋಡ ನೇಮಕ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜುಡೋ ಬಂಜಾರಾ ಫೌಂಡೇಶನ್  ಸಂಘಟನೆಯ ಚಿತ್ತಾಪುರ ತಾಲೂಕಿನ ವಾಡಿ ವಲಯ ಅಧ್ಯಕ್ಷರಾಗಿ ಯುವರಾಜ್ ಕಿಶನ್ ರಾಠೋಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜು ಪವಾರ್ ತಿಳಿಸಿದ್ದಾರೆ.

ಯುವರಾಜ್ ಕಿಶನ್ ರಾಠೋಡ ಅವರು ತಕ್ಷಣ ಅಧಿಕಾರ ವಹಿಸಿಕೊಂಡು ಜಿಲ್ಲಾ ಜುಡೋ ಬಂಜಾರಾ ಫೌಂಡೇಶನ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಎಲ್ಲ ರಾಜ್ಯ ಪಧಾಧಿಕಾರಿಗಳ ಸಹಯೋಗದಲ್ಲಿ ಸಂಘಟನೆ ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದ್ದು, ಈ ದಿಸೆಯಲ್ಲಿ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.

ಜಿಲ್ಲಾಧ್ಯಕ್ಷ ರಾಜು ಪವಾರ್ ನೇಮಕ ಮಾಡಿದ ಆದೇಶ ಪತ್ರ ನೀಡಿದರು. ಈ ಸಂದರ್ಭದಲ್ಲಿ ಅನಿಲ್ ಮಹಾರಾಜ್, ಮಾಜಿ ನ್ಯಾಯಾಧೀಶ ಸುಭಾಶ್ಚಂದ್ರ ರಾಠೋಡ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!