ಶಹಾಬಾದ ನಗರಸಭೆ ಪೌರಾಯುಕ್ತರಾಗಿ ಮನೋಜಕುಮಾರ ಗುರಿಕಾರ ಅಧಿಕಾರ ಸ್ವೀಕಾರ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರಸಭೆಯ ನೂತನ ಪ್ರಭಾರಿ ಪೌರಾಯುಕ್ತರಾಗಿ ಮನೋಜಕುಮಾರ ಗುರಿಕಾರ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಸರ್ಕಾರವು ಗುರಿಕಾರ ರವರ ತಮ್ಮ ಮೂಲ ಹುದ್ದೆಯ ಕರ್ತವ್ಯದ ಜೊತೆಗೆ ನಗರಸಭೆ ಶಹಾಬಾದ ಪೌರಾಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಮುಂದಿನ ಆದೇಶದವರೆಗೆ ವಹಿಸಿಕೊಂಡು ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿದೆ.
ಗುರಿಕಾರ ಅವರು ಈ ಮುಂಚೆ 6 ವರ್ಷಗಳ ಕಾಲ ಚಿಂಚೋಳ್ಳಿ, 6 ವರ್ಷ ಚಿತ್ತಾಪುರ ಹಾಗೂ ಒಂದು ವರ್ಷದಿಂದ ಪ್ರಸ್ತುತ ವಾಡಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಈಗ ವಾಡಿ ಪುರಸಭೆಯ ಜವಾಬ್ದಾರಿಯ ಜೊತೆಗೆ ಶಹಾಬಾದ ನಗರಸಭೆಯ ಪ್ರಭಾರಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮನೋಜಕುಮಾರ ಗುರಿಕಾರ ಅವರು ಕಚೇರಿ ಸಿಬ್ಬಂದಿ, ನಗರಸಭೆಯ ಮಾಜಿ ಸದಸ್ಯರುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಚುನಾಯಿತ ಜನ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ನಗರದ ಮೂಲಭೂತ ಸೌಕರ್ಯಗಳಾದ ಲೈಟ್, ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು, ನೀರನ್ನು ಪೋಲಾಗದಂತೆ ಸಮರ್ಪಕವಾಗಿ ನಾಗರಿಕರಿಗೆ ಸರಬರಾಜು ಮಾಡಲಾಗುವುದು, ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸುವುದು, ನಗರದ ಅಭಿವೃದ್ಧಿ ಹಾಗೂ ನೈರ್ಮಲ್ಯಕ್ಕಾಗಿ ನಾಗರಿಕರು ಪೂರ್ಣ ಸಹಕಾರ ನೀಡಬೇಕೆಂದರು.
ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ, ಹಂತ ಹಂತವಾಗಿ ನಗರವನ್ನು ಸುಂದರ ಹಾಗೂ ಸ್ವಚ್ಛವಾಗಿಡಲು ಶ್ರಮಿಸುವುದಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಶರಣಗೌಡ, ರಘುನಾಥ ನರ್ಸಾಳೆ, ಮೈನೋದ್ದಿನ, ಮೌಲಾಲಿ ಪಟೇಲ, ರಬ್ಬಾನಿ, ಪ್ರಾಣೇಶ ಕುಲಕರ್ಣಿ, ಶಿವಾನಂದ, ಸುನೀಲ ಕಣ್ಣಿ, ಮಹಾನಂದ ಪಾಟೀಲ, ಅಂಬಿಕಾ ದೊಡ್ಡಮನಿ ಮತ್ತು ನಗರ ಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ಸಾಹೇಬಗೌಡ ಬೊಗುಂಡಿ, ರಾಜೇಶ ಯನಗುಂಟಿ ಹಾಗೂ ನಿವೃತ್ತ ಸಿಬ್ಬಂದಿ ಸಾಬಣ್ಣ ಸುಂಗಲಕರ ಇದ್ದರು.

