Oplus_0

ಚಿತ್ತಾಪುರದಲ್ಲಿ ನಾಳೆ ಬೌದ್ಧ ಧಮ್ಮಾ ದೀಕ್ಷಾ ಬೈಕ್ ರ್ಯಾಲಿ ಮತ್ತು ಸಮಾರಂಭಕ್ಕೆ ಷರತ್ತಿಗೊಳಪಟ್ಟು ಪೊಲೀಸ್ ಅನುಮತಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಶನಿವಾರ ನಡೆಯಲಿರುವ 70 ನೇ ಬೌದ್ಧ ಧಮ್ಮಾ ದೀಕ್ಷಾ ಮಹಾಸಮಾರಂಭದ ಅಂಗವಾಗಿ ಬೈಕ್ ರ್ಯಾಲಿ ಮತ್ತು ಸಮಾರೋಪ ಸಮಾರಂಭ ಮಾಡಲು ಷರತ್ತಿಗೊಳಗೊಳ್ಳಪಟ್ಟು ಅನುಮತಿ ನೀಡಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆಯು ಕರ್ನಾಟಕದಾದ್ಯಂತ ಸಂಚರಿಸಿ ಅಕ್ಟೋಬರ್ 31 ರಂದು ಚಿತ್ತಾಪುರ ಪಟ್ಟಣಕ್ಕೆ ಬರುತ್ತಿರುವುದರಿಂದ ಶ್ರೀಕಾಂತ ಶಿಂಧೆ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಯರಗಲ್ ಕ್ರಾಸನಲ್ಲಿ ಬೈಕ್ ರ್ಯಾಲಿ ಮೂಲಕ ಸ್ವಾಗತ ಮಾಡಿಕೊಂಡು ಕೋರ್ಟ್ ರಸ್ತೆ ಎದುರುಗಡೆಯಿಂದ ಹೋಳಿಕಟ್ಟಾ, ಕಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಅಂಬೇಡ್ಕರ ನಗರಕ್ಕೆ ಪ್ರವೇಶಸಲಿದ್ದು, ನಂತರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 250 ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದಂತೆ ಈ ಕೆಳಕಂಡ 7 ಷರತ್ತಿಗೊಳಪಟ್ಟು ಬೈಕ್ ರ್ಯಾಲಿ ಮತ್ತು ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಲಾಗಿದೆ.

ಷರತ್ತುಗಳು:

1. ಬೈಕ್ ರ್ಯಾಲಿ/ ಸಮಾರೋಪ ಸಮಾರಂಭ ಸಭೆಗೆ ಸಂಬಂಧಪಟ್ಟ ಇತರೆ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವುದು, 2. ಬೈಕ್ ರ್ಯಾಲಿ/ ಸಮಾರೋಪ ಸಮಾರಂಭದ ಸಮಯದಲ್ಲಿ ಧ್ವನಿವರ್ಧಕ ಬಳುಸುವಂತಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದ ಪರವಾನಿಗೆ ಪಡೆದುಕೊಳ್ಳುವುದು, 3. ಬೈಕ್ ರ್ಯಾಲಿ/ ಸಮಾರೋಪ ಸಮಾರಂಭದ ಸಮಯದಲ್ಲಿ ಯಾವುದೇ ಜಾತಿ ಧರ್ಮಕ್ಕೆ ಅಪಮಾನವಾಗುಂತಹ ಹಾಡುಗಳು, ಪ್ರಚೋದನಕಾರಿ ಭಾಷಣಗಳನ್ನು ಮಾಡುವಂತಿಲ್ಲ, 4. ಬೈಕ್ ರ್ಯಾಲಿ/ ಸಮಾರೋಪ ಸಮಾರಂಭ ಸಮಯದಲ್ಲಿ ಸಾರ್ವಕನಿಕರಿಗೆ ಹಾಗೂ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, 5. ಬೈಕ್ ರ್ಯಾಲಿ/ ಸಮಾರೋಪ ಸಮಾರಂಭದ ಸಮಯದಲ್ಲಿ ಜನರು ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವುದು, 6. ಬೈಕ್ ರ್ಯಾಲಿ / ಸಮಾರೋಪ ಸಮಾರಂಭದ ಸಮಯದಲ್ಲಿ ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಅದರ ನಷ್ಟವನ್ನು ತಮ್ಮ ಕಡೆಯಿಂದ ಭರಿಸಲಾಗುವುದು, 7. ಇತರೆ ಯಾವುದೇ ಅಹಿತಕರ ಘಟನೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕು.

ಒಂದು ವೇಳೆ ಈ ಮೇಲೆ ನಮೂದಿಸಿದ ಷರತ್ತುಗಳು ಇತರೆ ಯಾವುದೇ ಕಾನೂನು ಉಲ್ಲಂಘನೆ ಆದರೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!