ಚಿತ್ತಾಪುರರಲ್ಲಿ ನಾಳೆ ಆರ್.ಎಸ್.ಎಸ್ ಪಥ ಸಂಚಲನ, 12 ಷರತ್ತಿಗೊಳಪಟ್ಟು ಪೊಲೀಸ್ ಅನುಮತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಧ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವ ಮತ್ತು ಪಥ ಸಂಚಲನಕ್ಕೆ 12 ಷರತ್ತಿಗೊಳಪಟ್ಟು ಪೊಲೀಸ್ ಅನುಮತಿ ನೀಡಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.
ಷರತ್ತುಗಳು:
1. ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಅಕ್ಟೋಬರ್ 31 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ರ ನಡುವೆ ನಡೆಸಿ ಪೂರ್ಣಗೊಳಿಸಬೇಕು ಹಾಗೂ ಸಮಯವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, 2. ತಾವು ಅನುಮತಿ ಕೋರಿ ನೀಡಿದ ಮನವಿ ಪತ್ರದಲ್ಲಿ ತಿಳಿಸಿದಂತೆ ಚಿತ್ತಾಪುರ ತಾಲೂಕ ವತಿಯಿಂದ ಪಥಸಂಚಲನ ನಡೆಯುತ್ತಿದ್ದು. ಅದರಂತೆ ಚಿತ್ತಾಪೂರ ತಾಲೂಕಿನ ಜನರಷ್ಟೆ ಬಾಗವಹಿಸುವಂತೆ ನೋಡಿಕೊಳ್ಳಬೇಕು, 3. ಪೊಲೀಸ್ ಇಲಾಖೆಯಿಂದ ನಿಗಧಿ ಪಡಿಸಿರುವ ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ ವೃತ್ತ, ಭುವನೇಶ್ವರಿ ವೃತ್ತ, ಜನತಾ ವೃತ್ತ, ನಾಗಾವಿ ವೃತ್ತ, ನಂದಕೀಶೋರ ಬಜಾಜ ಮನೆಯ ಎದುರುಗಡೆ, ಶ್ರೀ ಸೇವಾಲಾಲ್ ವೃತ್ತ, ಪುರಸಭೆ ಕಾರ್ಯಾಲಯ, ಹಳೇ ಗಂಜ್ ವೃತ್ತ, ಕಾಶಿಗಲ್ಲಿ ಗಣೇಶ ಮಂದಿರ, ಲಾಡ್ಜಿಂಗ್ ಕ್ರಾಸ್, ಬಜಾಜ್ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥಸಂಚಲನ ಕೈಗೊಳ್ಳುವುದು. ಬೇರೆ ಯಾವುದೆ ಮಾರ್ಗ ಬಳಸುವಂತಿಲ್ಲಾ. 4. ಈ ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿಯೇ ಕಟ್ಟು ನೀಟಾಗಿ ನಡೆಸಬೇಕು ಮತ್ತು ಮಾರ್ಗ ನಕ್ಷೆ ಪ್ರಕಾರ ಕಾರ್ಯಕ್ರಮ ಹೊರತು ಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳು/ಬೀದಿಗಳಲ್ಲಿ ಯಾವುದೇ ಭಾಷಣಗಳನ್ನು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು.
5. ಕಾರ್ಯಕ್ರಮದ ಆಯೋಜಕರು ಭಾಗವಹಿಸುವವರು ಆಹ್ವಾನಿತರು ಯಾವುದೇ ರಾಜಕೀಯ ಭಾಷಣಗಳನ್ನು ಮಾಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಭಾಷೆ ಅಥವಾ ಘೋಷಣೆಗಳನ್ನು ಬಳಸಬಾರದು. 6. ಧ್ವಜಗಳು, ಬ್ಯಾನರ್ಗಳು, ಬಂಟಿಂಗ್ ಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು. 7. ಸಮಾರಂಭದ ಆಯೋಜಕರು ಹಾಗೂ ಭಾಗವಹಿಸುವರು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳೀಯ ಅಡಳಿತದೊಂದಿಗೆ ಸಹಕರಿಸಬೇಕು.
8. ಪಥಸಂಚಲನ ಹಾಗೂ ಸಮಾರಂಭದ ಸಮಯದಲ್ಲಿ ಧ್ವನಿವರ್ಧಕ ಬಳುಸುವಂತಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದ ಪರವಾನಿಗೆ ಪಡೆದುಕೊಳ್ಳುವುದು. 9. ಪಥಸಂಚಲನ ಹಾಗೂ ಸಮಾರಂಭದ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತು ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು. 10. ಪಥಸಂಚಲನೆ ಹಾಗೂ ಸಮಾರಂಭದ ಸಮಯದಲ್ಲಿ ಜನರು ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವುದು.
11. ಪಥಸಂಚಲನ ಹಾಗೂ ಸಮಾರಂಭದ ಸಮಯದಲ್ಲಿ ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಅದರ ನಷ್ಟವನ್ನು ತಮ್ಮ ಕಡೆಯಿಂದ ಭರಿಸಲಾಗುವದು. 12. ಇತರೆ ಯಾವುದೇ ಆಹೀತಕರ ಘಟನೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕು.
ಈ ಮೇಲೆ ತಿಳಿಸಿದ ಷರತ್ತಿಗೊಳಪಟ್ಟು ಪೊಲೀಸ್ ಅನುಮತಿ ನೀಡಲಾಗಿದೆ. ಈ ಮೇಲೆ ತಿಳಿಸಿದ ಷರತ್ತುಗಳು ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

