Oplus_0

ಶಹಾಬಾದ ಸಂಗೀತ ಕಲಾ ಸಂಭ್ರಮ, ಗಿರಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ | ಕಲೆ, ಸಾಹಿತ್ಯದ ಬೆಳವಣಿಗೆಗೆ ಗಿರಿಸಿರಿ ಸಂಸ್ಥೆ ಪ್ರೇರಣೆ: ಮರಿಯಪ್ಪ ಹಳ್ಳಿ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟ್ಯ ಕಲೆಗೆ ಕಳೆದ ಮೂರು ವರ್ಷದಿಂದ ಗಿರಿಸಿರಿ ಸಂಸ್ಥೆ ಪ್ರೇರಣೆ ನೀಡುತ್ತಿದ್ದು, ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ನಗರದ ಶ್ರೀ ಜಗದಂಬಾ ದೇವಿ ದೇವಸ್ಥಾನ ಸಭಾಂಗಣದಲ್ಲಿ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ತಾಲೂಕ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 71ನೇ ರಾಜ್ಯೋತ್ಸವ ಸಂಬ್ರಮ ಹಾಗೂ 2026ನೇ ಸಾಲಿನ ಸಂಗೀತ ಕಲಾ ಸಂಬ್ರಮ ಹಾಗೂ ಗಿರಿಸಿರಿ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಂಸ್ಥೆ ಕಳೆದ ಮೂರು ವರ್ಷಗಳಿಂದ ನಾಡಿನಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ಈ ಮೂಲಕ ಕನ್ನಡ ನುಡಿ, ಭಾಷೆ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ಉದ್ಘಾಟನೆ ನೇರವೇರಿಸಿದ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ರಮೇಶ ಭಟ್ ಮಾತನಾಡಿ, ಸಂಸ್ಥೆಯ ಧ್ಯೇಯ ವಾಕ್ಯದಂತೆ “ನೂರು ಕಲೆ ಒಂದೇ ಭಾವ ಸಮ್ಮೀಲನ” ವ್ಯವಸ್ಥಿತವಾಗಿ ನಡೆದುಕೊಳ್ಳುತ್ತಿದ್ದು, ಕನ್ನಡ ಭಾಷೆಯ ಕಲೆ, ಸಾಹಿತ್ಯ, ಭರತ್ ನಾಟ್ಯ, ಜನಪದ, ಭಜನೆ, ಜಾನಪದ ಸೇರಿದಂತೆ ನೂರಾರು ಕಲೆಗಳನ್ನು ಕೇವಲ ಕನ್ನಡ ಭಾಷೆಯ ಉತ್ತುಂಗುಕ್ಕೆ ಒಯ್ಯುವ ಒಂದೇ ಭಾವದಲ್ಲಿ ಸಮ್ಮೀಲನಗೊಳಿಸುತ್ತಿದ್ದು, ಕೇವಲ ಮೂರ ವರ್ಷದಲ್ಲಿ ರಾಜ್ಯ ಮಟ್ಟದಲ್ಲಿ ಗಿರಿಸಿರಿ ಪ್ರಶಸ್ತಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು.

ಕದಸಂಸ ರಾಜ್ಯ ಸಂ. ಸಂಚಾಲಕ ಸುರೇಶ ಮೆಂಗನ್ ಮಾತನಾಡಿದರು. ಕಲಬುರಗಿ ಜೀಮ್ಸ್ ಮನೋವಿಜ್ಞಾನಿ ಡಾ.ಕೇದರನಾಥ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತ ಲೋಹಿತ ಕಟ್ಟಿ ವಹಿಸಿಕೊಂಡಿದ್ದರು.

ವೇದಿಕೆ ಮೇಲೆ ಸ್ವಾಗತ ಸಮಿತಿ ಅಧ್ಯಕ್ಷ ನಿಂಗಣ್ಣ ಹುಳಗೋಳ, ಪ್ರಾಚಾರ್ಯ ಬಾಲರಾಜ ಮಾಚನೂರ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಕುಂತಲಾ ಸಾಕ್ರೆ, ಕಲಾವಿದ ಶಂಕರ ಜಾನಾ, ಡಾ.ಅಹ್ಮದ ಪಟೇಲ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಭೀಮಯ್ಯ ಗುತ್ತೇದಾರ, ಅಶೋಕ ಯಾದಗಿರಿ ಇದ್ದರು.

ವಿವಿಧ ಶಾಲಾ ಮಕ್ಕಳಿಂದ ನೃತ್ಯ, ಭಜನಾ ತಂಡಗಳಿಂದ ಭಜನೆ, ಡಿ.ಸ್ಪೀರಿಟ್ ಸಂಸ್ಥೆಯಿಂದ ನೃತ್ಯಗಳು ನಡೆದವು. ಆನಂದ ಪಾಟೀಲ, ಅಶೋಕ ಪೂಜಾರಿ, ಮಾರ್ಥಂಡ ಜೀವಣಗಿ, ಶಿವಯೋಗಿ ಜಾನಾ, ರಾಜಶೇಖರ ದೇವರಮನಿ, ವಿಶ್ವರಾಧ್ಯ ಕಟ್ಟಿ, ಸದಾಶಿವ ಪೋತನಕರ್, ಇಮಾನ್ಯುವಲ್ ಡೇವಿಡ್, ರವೀಂದ್ರ ಭಟವಾಲ್, ಹಣಮಂತ ಲಾಸಂಗೆ, ಶಿವಲಿಂಗಪ್ಪ ಹೆಬ್ಬಾಳ ಅವರನ್ನು ವಿಶೇಷವಾಗಿ ಸನ್ಮಾನ ಮಾಡಲಾಯಿತು.

ಗಿರಿಸಿರಿ ಪ್ರಶಸ್ತಿ ಪ್ರದಾನ: 

2026ನೇ ಸಾಲಿನ ಗಿರಿಸಿರಿ ಪ್ರಶಸ್ತಿಯನ್ನು ಡಾ.ಜಗದೇವಪ್ಪ ಧರಣಿ, ಅನೀಲ ಕುಂಡಬಲ್, ಡಾ.ನುಸ್ರತ್‌ಮೋಹಿಯುದ್ದಿನ್ ಪಟೇಲ, ಪರಮೇಶ್ವರ ಪೆಂಚನಕರ್ (ಶಿಕ್ಷಣ), ಡಾ.ಬಾಬುರಾವ ಶೇರಿಕರ್ (ತಾಂತ್ರಿಕ ಶಿಕ್ಷಣ), ಡಾ.ರೇಹಮಾನ್ ಪಟೇಲ (ಚಿತ್ರಕಲೆ), ಡಾ.ಲಿಂಗಪ್ಪ ಉಡಚಣ (ವಿಜ್ಞಾನ), ಪ್ರಕಾಶಚಂದ ಜೈನ್ (ಸಾಹಿತ್ಯ), ನಾಗೇಂದ್ರ ಉದನೂರ (ಸಮಾಜ ಸೇವೆ), ನೀಲಕಂಡ ಹೊನಕಲ್ (ಸಾಹಿತ್ಯ ಸಂಘಟಕ), ಪೀರಪ್ಪ ನೀನಾಸಂ (ರಂಗಭೂಮಿ ಸಂಗೀತ), ವಿಶ್ವನಾಥ ತೋಟ್ನಳ್ಳಿ (ಜಾನಪದ), ವಿಶ್ವರಾಧ್ಯ ವಿಶ್ವಕರ್ಮ (ಸಾಹಿತ್ಯ), ಸಾನ್ವಿ ಜಗದಬಾವಿ, ಭವಾನಿ ಅಮ್ಮಣ್ಣ (ಭರತ ನಾಟ್ಯ) ಅವರಿಗೆ ನೀಡಿ ಗೌರವಿಸಲಾಯಿತು.

ಪ್ರವೀಣ ರಾಜನ್ ನಿರೂಪಿಸಿದರು, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮರಲಿಂಗ ಯಾದಗಿರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಸಂಸ್ಥೆ ಅಧ್ಯಕ್ಷ ಅನೀಲಕುಮಾರ ಮೈನಾಳಕರ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!