Oplus_0

ಚಿತ್ತಾಪುರದಲ್ಲಿ ಎಂಪಿ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ 

ಜನರ ಧ್ವನಿಯಾಗಿ ಕೆಲಸ ಮಾಡುವೆ: ದೊಡ್ಡಮನಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಲೋಕಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ 16 ಸಾವಿರ ಮತಗಳ ಬಹುಮತ ನೀಡಿ ನನಗೆ ಆಶೀರ್ವದಿಸಿದ್ದಿರಿ, ಹೀಗಾಗಿ ಸಂಸತ್ ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ-ವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ  ಮಾತನಾಡಿದ ಅವರು, ಈ ಭಾಗದ ಮತದಾರರು ಖರ್ಗೆ ಸಾಹೇಬರಿಗೆ, ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಬಾರಿ ಈಗ ನನಗೂ ಕೂಡ ಆಶೀರ್ವಾದ ಮಾಡಿದ್ದೀರಿ ಹೀಗಾಗಿ ನಿಮ್ಮ ನಿರೀಕ್ಷೆಯಂತೆ ಹಾಗೂ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು, ನಿಮ್ಮ ಸಹಕಾರ ಮತ್ತು ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಕೇಳಿಕೊಂಡರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಾಶ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಭಾಗದ ಮತದಾರರು 371 ಜೆ ರೂವಾರಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಖುಣ ತೀರಿಸಿದಂತಾಗಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದಂತೆ ಐದು ಗ್ಯಾರಂಟಿಗಳು ಜಾರಿಗೆ ತಂದಿದ್ದು ನುಡಿದಂತೆ ನಡೆದಿದ್ದೇವೆ, ಯಾವಾಗ ಯಾವಾಗ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಆಗೆಲ್ಲ ಜನಸಾಮಾನ್ಯರ ಮತ್ತು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗುಂಡಗುರ್ತಿ ಮಗ ರಾಧಾಕೃಷ್ಣ ದೊಡ್ಡಮನಿ ಆಗಲಿ ಚಿತ್ತಾಪುರಿನ ಮೊಮ್ಮಗ ನಾನಾಗಲಿ ಖಾಲಿ ಕೈಯಿಂದ ಬಂದಿಲ್ಲ 63 ಕೋಟಿ ಅನುದಾನದ ಜೊತೆಗೆ ಬಂದಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ನನಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಿ ಚಿತ್ತಾಪುರ ಅಭಿವೃದ್ಧಿಯ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಖರ್ಗೆ, ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ರೂ. 7,000 ಕೋಟಿ ಹಾಗೂ ಚಿತ್ತಾಪುರಕ್ಕೆ ರೂ. 300 ಕೋಟಿ ಯೋಜನೆಗಳ ಒಪ್ಪಿಗೆ ಸಿಕ್ಕಿದೆ. ಜಿಲ್ಲೆಯ ಮೂವತ್ತು ಗ್ರಾಮಗಳ ಅಭಿವೃದ್ಧಿಯ ನೀಲಿ ನಕ್ಷೆ ಸಿದ್ದವಾಗಿದೆ. ಇದು ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ, ವಾಡಿ ಯ ಸಮಗ್ರ ಅಭಿವೃದ್ದಿಯ ನೀಲಿನಕ್ಷೆ ಕೂಡ ತಯಾರಾಗಿದೆ ಇದಕ್ಕೆ ರೂ. 25 ಕೋಟಿ ತೆಗೆದಿರಸಲಾಗಿದೆ. ಚಿತ್ತಾಪುರ ಪಟ್ಟಣದಲ್ಲಿ ವಿಜ್ಞಾನ ಕೇಂದ್ರ, ಮಾಡಬೂಳ ಹತ್ತಿರ ಮೃಗಾಲಯ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.

ಸುವರ್ಣ ಗ್ರಾಮೋದಯ ಮಾದರಿಯಂತೆ ಕಾಯಕ ಗ್ರಾಮ ಯೋಜನೆ ಜಾರಿಗೆ ತರಲು ಆಲೋಚಿಸಲಾಗಿದೆ. ಇದರಲ್ಲಿ ಸಂಸದರ ಅನುದಾನ ಕೂಡಾ ಬಳಕೆಯಾಗಲಿದೆ. ಇದರ ಹಿಂದೆ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಕನಸಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಕ್ಕೆ ಕನಿಷ್ಠ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಲ್ಲಿನ ಸಾಮರ್ಥ್ಯ ಮತ್ತು ಜ್ಞಾನ ಬುದ್ಧಿವಂತಿಕೆ ಹಾಗೂ ಅಭಿವೃದ್ಧಿ ಪರ ಚಿಂತನೆಗಳು ನೋಡಿದರೆ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಕೋಲಿ ಸಮಾಜದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ವಿಷಯ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಲ್ಲಿ ಮನವಿ ಮಾಡಿಕೊಂಡರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಾಸಕ ಎಂ.ವೈ.ಪಾಟೀಲ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ನೂತನ ಎಂಎಲ್ಸಿ ಜಗದೇವ ಗುತ್ತೇದಾರ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಉಣ್ಣೆ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ್, ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರ ಭೀಣ್ಣಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ, ವೀರಣ್ಣಗೌಡ ಪರಸರೆಡ್ಡಿ, ಶಂಕ್ರಯ್ಯಸ್ವಾಮಿ ಮದರಿ, ಶ್ರೀನಿವಾಸ ಸಗರ, ಶಂಭುಲಿಂಗ ಗುಂಡಗುರ್ತಿ, ಅರವಿಂದ್ ಚವ್ಹಾಣ, ಚಂದ್ರಿಕಾ ಪರಮೇಶ್ವರ್, ಲತಾ ರಾಠೋಡ, ಅಜೀಜ್ ಸೇಟ್, ಜಗದೇವರೆಡ್ಡಿ ಪಾಟೀಲ, ಟೋಪಣ್ಣ ಕೋಮಟೆ, ಬಸವರಾಜ ಪಾಟೀಲ ಹೇರೂರು, ಪ್ರಕಾಶ್ ಜೈನ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ವಿನೋದ ಗುತ್ತೇದಾರ, ಶ್ರೀನಿವಾಸರೆಡ್ಡಿ ಪಾಲಪ್, ಮನ್ಸೂರ್ ಪಟೇಲ್, ಜಯಪ್ರಕಾಶ ಕಮಕನೂರ, ಶಿವಕಾಂತ ಬೆಣ್ಣೂರಕರ್, ಜಗದೀಶ್ ಚವ್ಹಾಣ, ಮಲ್ಲಪ್ಪ ಹೊಸಮನಿ, ಹಣಮಂತ ಸಂಕನೂರ, ಸುನೀಲ್ ದೊಡ್ಡಮನಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಸ್ವಪ್ನಾ ಪಾಟೀಲ, ನಾಗರೆಡ್ಡಿ ಗೋಪಸೇನ್, ಸಂದೇಶ ಕಮಕನೂರ, ಓಂಕಾರ ರೇಷ್ಮಿ, ಶರಣಪ್ಪ ನಾಟೀಕಾರ, ಸಂಜಯ ಬುಳಕರ್, ಶಂಕರ ಲೀಡರ್, ಶರಣು ಡೋಣಗಾಂವ, ಗುಂಡು ಐನಾಪುರ, ಉದಯಕುಮಾರ್ ಸಾಗರ, ಕಾಶಪ್ಪ ಡೋಣಗಾಂವ, ಭೀಮ ಹೊಳಿಕಟ್ಟಿ, ಹುಸನಯ್ಯ ಗುತ್ತೇದಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಸ್ವಾಗತಿಸಿದರು, ಶಾಂತಣ್ಣ ಚಾಳೀಕಾರ, ಬಸವರಾಜ ಚಿನ್ನಮಳ್ಳಿ ನಿರೂಪಿಸಿದರು. ಸಮಾರಂಭ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಧಾಕೃಷ್ಣ ದೊಡ್ಡಮನಿ ಅವರ ಭವ್ಯ ಮೆರವಣಿಗೆ ನಡೆಯಿತು.

   “ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಸರಳ ಸಜ್ಜನರಾಗಿದ್ದು, ಸಮಸ್ಯೆ ಅಂತ ಬಂದವರಿಗೆ ಪರಿಹಾರ ನೀಡುವ ಒಬ್ಬ ಶಿಸ್ತು ಬದ್ಧತೆಯ ನಾಯಕರಾಗಿದ್ದು ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವಂತೆ ಇಲ್ಲಿವರೆಗೆ ಸಾಕಷ್ಟು ಜನಸೇವೆ ಮಾಡಿದ್ದಾರೆ, ಖರ್ಗೆ ಸಾಹೇಬರಂತೆ ರಾಧಾಕೃಷ್ಣ ಅವರು ಸಹ ಜಿಲ್ಲೆಯ ಅಭಿವೃದ್ಧಿ ಮಾಡಲಿದ್ದಾರೆ “.-ಜಗದೇವ ಗುತ್ತೇದಾರ, ಎಂಎಲ್ಸಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಲಬುರ್ಗಿ.

Spread the love

Leave a Reply

Your email address will not be published. Required fields are marked *

error: Content is protected !!