Oplus_131072

ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಚುನಾವಣೆ | ಭೀಮನಳ್ಳಿ ಕ್ಷೇತ್ರದಿಂದ ಮಹಾದೇವಪ್ಪ ನಾಶಿ, ಚಿತ್ತಾಪುರ ಕ್ಷೇತ್ರದಿಂದ ವೀರುಪಾಕ್ಷಪ್ಪ ಗಡ್ಡದ್ ಆಯ್ಕೆ: ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್’ಡಿ) ಗೆ ಭಾನುವಾರ ಭೀಮನಳ್ಳಿ ಹಾಗೂ ಚಿತ್ತಾಪುರ ಎರಡು ಕ್ಷೇತ್ರಗಳಿಗೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿ ನಡೆದು ಯಶಸ್ವಿಯಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಸಾಲಗಾರರ ಭೀಮನಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ ಮಹಾದೇವಪ್ಪ ಮಲ್ಲಪ್ಪ ನಾಶಿ 16 ಮತಗಳು ಪಡೆದು ಭರ್ಜರಿ ಗೆಲುವು ಸಾಧಿಸಿದ್ದರೆ, ಪ್ರತಿಸ್ಪರ್ಧಿ ರಾಮಣ್ಣ ಕೃಷ್ಣಪ್ಪ ನಾಟೀಕಾರ 10 ಮತಗಳು ಪಡೆದು ಸೋಲು ಅನುಭವಿಸಿದ್ದಾರೆ. ಒಟ್ಟು 29 ಮತದಾರರ ಪೈಕಿ 26 ಮತದಾರರು ಮತ ಚಲಾಯಿಸಿದ್ದು ಉಳಿದ 3 ಜನ ಮತದಾರರು ಗೈರಾಗಿದ್ದಾರೆ.

ಸಾಲಗಾರರಲ್ಲದ ಚಿತ್ತಾಪುರ ಕ್ಷೇತ್ರದಿಂದ ವೀರುಪಾಕ್ಷಪ್ಪ ಮಲಕಾಜಪ್ಪ ಗಡ್ಡದ್ 48 ಮತಗಳು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ, ಸಮೀಪದ ಪ್ರತಿಸ್ಪರ್ಧಿ ಪ್ರಸಾದ್ ಚಂದ್ರಶೇಖರ ಅವಂಟಿ 46 ಮತಗಳು ಪಡೆದು ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಒಟ್ಟು 105 ಮತದಾರರ ಪೈಕಿ 95 ಮತದಾರರು ಮತ ಚಲಾಯಿಸಿದ್ದು ಒಂದು ತೀರಸ್ಕೃತವಾಗಿದೆ ಉಳಿದ 10 ಜನ ಮತದಾರರು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

ಬಿಜೆಪಿ ಬೆಂಬಲಿತ ಪ್ರಸಾದ್ ಅವಂಟಿ ಹಾಗೂ ಕಾಂಗ್ರೆಸ್ ಬೆಂಬಲಿತ ವೀರುಪಾಕ್ಷಪ್ಪ ಗಡ್ಡದ್ ಅವರ ನಡುವೆ ತೀವ್ರ ಪೈಪೋಟಿ ಹಾಗೂ ಹಣಾಹಣಿ ಏರ್ಪಟ್ಟಿತ್ತು ಎಲ್ಲರ ಚಿತ್ತ ಈ ಕ್ಷೇತ್ರದ ಚುನಾವಣೆಯ ಮೇಲೆಯೇ ಇತ್ತು. ಮತಗಟ್ಟೆ ಕೇಂದ್ರದ ಹೊರಗಡೆ ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತದಾರರಿಗೆ ಓಲೈಸುವ ಹಾಗೂ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡುತ್ತಿವುದು ಕಂಡುಬಂತು. ಹೀಗಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಸಾದ್ ಅವಂಟಿ ಕೇವಲ 2 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ತೀವ್ರ ಮುಖಭಂಗ ಉಂಟುಮಾಡಿದೆ.

ಪಿಎಲ್’ಡಿ ಬ್ಯಾಂಕಿನ ಒಟ್ಟು 14 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಾಗೂ ಭೀಮನಳ್ಳಿ ಮತ್ತು ಚಿತ್ತಾಪುರ ಈ ಎರಡು ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ನಿರ್ದೇಶಕರಿಗೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.

ಸಾಯಂಕಾಲ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಮುಖಂಡರಾದ ಶಿವರುದ್ರಪ್ಪ ಭೀಣ್ಣಿ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ಚಂದ್ರಶೇಖರ ಸಾತನೂರು, ಅಣ್ಣಾರಾವ್ ಪಾಟೀಲ ಮುಡಬೂಳ, ಶೀಲಾ ಕಾಶಿ, ಶರಣಪ್ಪ ನಾಟೀಕಾರ, ಸುನೀಲ್ ದೊಡ್ಡಮನಿ, ನಾಗರೆಡ್ಡಿ ಗೋಪಸೇನ್, ದೇವಿಂದ್ರ ಅರಣಕಲ್, ನಾಗಯ್ಯ ಗುತ್ತೇದಾರ, ಸಂಜಯ ಬುಳಕರ್, ಕಾಶಪ್ಪ ಡೋಣಗಾಂವ, ಸಂತೋಷ ಪೂಜಾರಿ, ರತನ್ ಕನ್ನಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!