ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಚುನಾವಣೆ ಸಂಗಣ್ಣಗೌಡ ಮಲ್ಯದ್ ಮತ್ತು ಬಸವರಾಜ ಬಳೂಂಡಗಿ ಪೆನಲ್ ನಡುವೆ ತೀವ್ರ ಪೈಪೋಟಿ, ಅಬ್ಬರದ ಪ್ರಚಾರ 

ನಾಗಾವಿ ಎಕ್ಸಪ್ರೆಸ್‌

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಶಾಖೆಗೆ 2024-29 ನೇ ಸಾಲಿನ ಅವಧಿಗಾಗಿ ಇದೇ ಅ.28 ರಂದು ನಡೆಯಲಿರುವ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದಿಂದ ಇಂಗಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗಣ್ಣಗೌಡ ಮಲ್ಯದ್ ನೇತೃತ್ವದ ಪ್ರಜಾಸತ್ತಾತ್ಮಕ ಕ್ರಿಯಾಶೀಲ ಶಿಕ್ಷಕರ ಪೆನಲ್‌ ಹಾಗೂ ಕೈಲಾಸ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಬಳೂಂಡಗಿ ನೇತೃತ್ವದ ಶಿಕ್ಷಕರ ಸ್ನೇಹಿ ಪೆನಲ್ ಅವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ, ರಾಜಕೀಯ ಚುನಾವಣೆಗೆ ಮೀರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆದಿದೆ.

ಸಂಗಣ್ಣಗೌಡ ಪೆನಲ್ ನೇತೃತ್ವದಲ್ಲಿ ಚಿತ್ತಾಪುರ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಭದ್ರಪ್ಪ ಗುರುಮಠಕಲ್‌, ಎಲ್.ಪಿ.ಎಸ್ ಹಿರೇಮಣಿ ತಾಂಡಾದ ಶಿಕ್ಷಕ ಮಹಾಂತೇಶ್ ಪ್ರಸನ್ನ, ಜಿಎಲ್.ಪಿಎಸ್ ಮೊಳಿ ತಾಂಡಾದ ಶಿಕ್ಷಕಿ ಸುಮಂಗಲಾ ಜಾಧವ, ಜಿಎಚ್.ಪಿಎಸ್ ಉರ್ದು ವಾಡಿ ಶಾಲೆಯ ಶಿಕ್ಷಕಿ ಅಪ್ಸರಾಬೇಗಂ ಶೇಖ್ ಅವರು ತಮ್ಮ ಬೆಂಬಲಿಗ ಶಿಕ್ಷಕರೊಂದಿಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರೆ, ಇತ್ತ ಕಡೆ ಬಸವರಾಜ ಬಳೂಂಡಗಿ ನೇತೃತ್ವದಲ್ಲಿ ಚಿತ್ತಾಪುರ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ ನಾಲವಾರ, ಚಾಮನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೌತಮಿ, ಗಂಡಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹ್ಮದ್ ಜಾವೀದ್, ಅಲ್ಲೂರ.ಬಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಾಬಣ್ಣ ಜಕಬೋ ಅವರು ತಮ್ಮ ಬೆಂಬಲಿಗರೊಂದಿಗೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಎರಡು ಪೆನಲ್ ಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಸಂಗಣ್ಣಗೌಡ ಪೆನಲ್ ಪರ ಶಿಕ್ಷಕರಾದ ವಿಜಯಕುಮಾರ ಬಂಕಲಗಿ, ದೇವಪ್ಪ ನಂದೂರಕ‌ರ್, ಹಾಜಿಸಾಬ ಮುಲ್ಲಾ, ವೀರಸಸಂಗಪ್ಪ ಸುಲೇಗಾಂವ, ಜಗನಾಥ ಬಡಿಗೇರ, ಗುರುಲಿಂಗಪ್ಪ ದೊಡ್ಡಮನಿ, ಸುರೇಶ ಓಂಕರ್‌, ಬಸಪ್ಪ ಮುಗುಳಖೋಡ, ವೆಂಕಟೇಶ್‌ ದೇಸಾಯಿ, ಪವನ, ಮಹೇಶ ಸಾತನೂರ, ರಾಜಶೇಖರ ಸನ್ನತ್ತಿ, ಅಮರನಾಥ ಕರದಾಳ, ಸಾಯಬಣ್ಣ ಯಡ್ಡಳ್ಳಿ, ಶಾಂತಮಲ್ಲಪ್ಪ ಪಾಟೀಲ ಅವರು ಪ್ರಚಾರ ಕಾರ್ಯಕ್ಕೆ ಸಾತ್ ನೀಡಿದ್ದಾರೆ.

ಬಳೂಂಡಗಿ ಪೆನಲ್ ಪರ ಶಿಕ್ಷಕರಾದ ಶರಣಪ್ಪ ಐಕೂರ, ಸ್ವರ್ಣಲತಾ, ಹುಸೇನ್ ಪಾಷಾ, ಯೂಸುಫ್ ಖಾನ, ಅಯ್ಯಪ್ಪ, ಸೊಂದಪ್ಪ ಬಬಲಾದ, ರಮೇಶ್ ಪತ್ತಾರ, ಅಂಬಣ್ಣ, ಸಂಗಣ್ಣ, ಮಂಜುನಾಥ್, ಶಿವಲೀಲಾ, ಆದಪ್ಪ ಬಗಲಿ ಅವರು ಪ್ರಚಾರ ಕಾರ್ಯಕ್ಕೆ ಸಾತ್ ನೀಡಿದ್ದಾರೆ.

ಪ್ರಚಾರದ ಭರಾಟೆ ನೋಡಿದರೆ ಶಿಕ್ಷಕ ಮತದಾರರು ಯಾವ ಪೇನಲ್ ಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದು ಕಾದುನೋಡಬೇಕಿದೆ.

Spread the love

Leave a Reply

Your email address will not be published. Required fields are marked *

You missed

error: Content is protected !!