ರಾವೂರದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ
ಅಖಂಡ ರಾಷ್ಟ್ರ ಕತೃ ಸರ್ದಾರ್ ವಲ್ಲಭಭಾಯಿ ಪಟೇಲ್ : ಸಿದ್ದಲಿಂಗ ಬಾಳಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ಅಖಂಡ ರಾಷ್ಟ್ರ ನಿರ್ಮಾಣದ ಕತೃ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಿದ್ದಾರೆ. ಸ್ವಾತಂತ್ರ್ಯದ ಹೋರಾಟದ ಮುಂಚೂಣಿ ನಾಯಕರಾಗಿ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ತಮ್ಮ ದಿಟ್ಟ ನಿಲುವು, ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯದ ನಂತರ 550 ಕ್ಕಿಂತ ಹೆಚ್ಚು ದೇಶಿಯ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಿದ ಮಹಾನ್ ನಾಯಕರಾಗಿದ್ದಾರೆ. ದೇಶದ ಏಕತೆಯ ಪ್ರತೀಕವಾಗಿ ಸರ್ದಾರ್ ಅವರು ನಿಲ್ಲುತ್ತಾರೆ. ಇವರ ಆಶಯಗಳು ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು.
ಮುಖ್ಯಗುರು ವಿದ್ಯಾಧರ ಖಂಡಾಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಗುರು ಗಂಗಪ್ಪ ಕಟ್ಟಿಮನಿ ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಭೀಮಾಶಂಕರ ಬಮ್ಮನಳ್ಳಿ, ಶಿವಾನಂದ ಡೋಮನಾಳ, ಸುಭಾಷ ಚವ್ಹಾಣ, ಈರಣ್ಣ ಹಳ್ಳಿ, ಶಿವಕುಮಾರ್ ಸರಡಗಿ, ಶಾಮರಾಯ ದೊಡ್ಡಮನಿ, ಈಶಪ್ಪ ಇಂಗಳಗಿ, ಬಾಬು ಕಣ್ಣುರ, ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಂತರ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಭೋಧಿಸಲಾಯಿತು.