ಅಳ್ಳೋಳ್ಳಿಯಲ್ಲಿ ಹಂಪಿ ವಿವಿಯಿಂದ ಆಯೋಜನೆ
ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಕುರಿತು ಸೆ.22 ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದ ಗದ್ದಗಿ ಶ್ರೀ ಅಯ್ಯಪ್ಪಯ್ಯ ಮಹಾತ್ಮಪೀಠಧಲ್ಲಿ ಶ್ರೀರಂಗ ದತ್ತಿನಿಧಿ ಹಾಗೂ ನಾಟಕ ವಿಭಾಗ ಸಂಗೀತ ಮತ್ತು ನೃತ್ಯ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಅಯ್ಯಪ್ಪಯ್ಯ ಮಹಾತ್ಮಪೀಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಸೆ.22 ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾತ್ಮ ಪೀಠದ ಶ್ರೀ ನಾಗಪಯ್ಯ ಮಹಾಸ್ವಾಮಿಗಳು, ವಿಚಾರ ಸಂಕಿರಣ ನಿರ್ದೇಶಕ ನರಸಿಂಗರಾವ್ ಹೇಮನೂರ ಅವರು ತಿಳಿಸಿದ್ದಾರೆ.
ಶ್ರೀಮಠದ ನಾಗಪಯ್ಯ ಮಹಾಸ್ವಾಮಿಗಳು, ಸಿರಸಪಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸುವರು, ಅತಿಥಿಯಾಗಿ ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರು, ಹಂಪಿ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ್ ಅವರು ರಂಗಕಲೆ ಮತ್ತು ಸಂಗೀತಕ್ಕೆ ಶ್ರೀಮಠದ ಕೊಡುಗೆ ಕುರಿತು ಆಶಯ ನುಡಿ ಹೇಳುವರು. ವಿಚಾರ ಸಂಕಿರಣ ನಿರ್ದೇಶಕ ನರಸಿಂಗರಾವ್ ಹೇಮನೂರ ಸ್ವಾಗತಿಸುವರು, ಕಲಬುರ್ಗಿ ಶಿಕ್ಷಕ ದತ್ತಾತ್ರೇಯ ವಿಶ್ವಕರ್ಮ ನಿರೂಪಣೆ ಮಾಡುವರು.
ಗೋಷ್ಠಿ 1 ರಂಗ ಪರಂಪರೆ ಬೆಳಗ್ಗೆ 11.30ಕ್ಕೆ.
ಚಿತ್ತಾಪುರ ತಾಲೂಕಿನ ರಂಗ ಪರಂಪರೆ ಚಾರಿತ್ರಿಕ ನೋಟ ಕುರಿತು ರಾಜೇಂದ್ರ ಬಡಿಗೇರ್ ಕಲಬುರ್ಗಿ , ಗ್ರಾಮೀಣ ರಂಗ ಪರಂಪರೆ ಚಿತ್ತಾಪುರ ತಾಲೂಕಿನ ಕೊಡುಗೆ ಕುರಿತು ಪ್ರಭಾಕರ ಜೋಶಿ ಸೇಡಂ ಹಾಗೂ ಪ್ರಮುಖ ರಂಗ ಪ್ರಯೋಗಗಳು ಮತ್ತು ರಂಗ ತಾಂತ್ರಿಕತೆ ಕುರಿತು ಮಹಿಪಾಲರೆಡ್ಡಿ ಮುನ್ನೂರು ಸೇಡಂ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಗೋಷ್ಠಿ 2 ಸಂಗೀತ ಪರಂಪರೆ ಮಧ್ಯಾಹ್ನ 2 ಗಂಟೆಗೆ.
ಚಿತ್ತಾಪುರ ತಾಲೂಕಿನ ಸಂಗೀತ ಪರಂಪರೆ ಚಾರಿತ್ರಿಕ ನೋಟ ಕುರಿತು ಸಂಜೀವ್ ಸಿರನೂರಕರ್ ಕಲಬುರ್ಗಿ, ರಂಗ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ ಪರಂಪರೆ ಕುರಿತು ಶಿವಣ್ಣ ಹಿಟ್ಟಿನ್ ಚಿತ್ತಾಪುರ ಹಾಗೂ ಪ್ರಮುಖ ರಂಗ ಸಂಗೀತಗಾರರು ಮತ್ತು ಸಂಗೀತದ ವೈವಿಧ್ಯತೆ ಕುರಿತು ಕಾಶಿನಾಥ ಬಿರಾದಾರ ಬೆಳಗುಂಪಿ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಸಾಯಂಕಾಲ 4 ಗಂಟೆಗೆ ಸಮಾರೋಪ.
ಶ್ರೀಮಠದ ನಾಗಪಯ್ಯ ಮಹಾಸ್ವಾಮಿಗಳು ಮತ್ತು ಸಿರಸಪಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ ಸಮಾರೋಪ ನುಡಿಗಳು ಹೇಳುವರು, ಕಲಬುರ್ಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸುವರು, ವೀರಭದ್ರಪ್ಪ ತೆಂಗಳಿ ಸೇಡಂ ಸ್ವಾಗತಿಸುವರು, ಬಸವರಾಜ ಬಡಿಗೇರ್ ಬೋರಗಿ ನಿರೂಪಿಸುವರು, ಶಿವಪ್ರಸಾದ್ ವಿಶ್ವಕರ್ಮ ಸೇಡಂ ವಂದಿಸುವರು ಎಂದು ಮಾಹಿತಿ ನೀಡಿದ್ದಾರೆ.