ಚಿತ್ತಾಪುರ ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು, ಸಾರ್ವಜನಿಕರು ಸಹಕರಿಸಲು ಪುರಸಭೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣಕ್ಕೆ ಸದ್ಯ ಪ್ರತಿದಿನ ನೀರು ಸರಬರಾಜು ಮಾಡುತ್ತಿದ್ದು, ಮುಂಬರುವ ಬೆಸಿಗೆಯಲ್ಲಿ ಮುಂಜಾಗೃತಾ ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿನ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರಿಗೆ ಸಮರ್ಪಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಏಪ್ರಿಲ್ 4 ರಿಂದ ದಿನ ಬಿಟ್ಟು ದಿನ (ಎರಡು ದಿನಕ್ಕೊಮ್ಮೆ) ನೀರು ಸರಬರಾಜು ಮಾಡಲಾಗುವುದು. ಕಾರಣ ಸಾರ್ವಜನಿಕರು ಸಹಕರಿಸಲು ಹಾಗೂ ನೀರನ್ನು ಮಿತವಾಗಿ ಬಳಸಬೇಕು ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರು ಕೋರಿದ್ದಾರೆ.
ಪಟ್ಟಣದ ನಾಗರಿಕರು ತಮ್ಮ ನೀರಿನ ಶುಲ್ಕವನ್ನು/ಬಾಕಿ ಶುಲ್ಕವನ್ನು ಪುರಸಭೆಗೆ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

