Oplus_131072

ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಚುನಾವಣೆಯಲ್ಲಿ 14 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ, ಉಳಿದ 2 ಕ್ಷೇತ್ರಗಳಿಗೆ ಮಾತ್ರ ಜೂ.15 ರಂದು ಚುನಾವಣೆ: ನಾಗಯ್ಯ ಹಿರೇಮಠ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ಚಿತ್ತಾಪುರ (ಪಿಎಲ್’ಡಿ) ಚುನಾವಣೆಯ ನಿಮಿತ್ತ ಮಂಗಳವಾರ ಹಲವರು ನಾಮಪತ್ರ ವಾಪಸ್ ಪಡೆದಿದ್ದರಿಂದ 14 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಳಿದ 2 ಕ್ಷೇತ್ರಗಳಿಗೆ ಮಾತ್ರ ಜೂ.15 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

12 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾದವರು:

ಕಾಳಗಿ (ಬಿಸಿಬಿ)-ಯಂಕಾರೆಡ್ಡಿ ತಿಪ್ಪಾರೆಡ್ಡಿ, ಕಂದಗೋಳ (ಸಾಮಾನ್ಯ)-ಶಿವರಾಯ ಮಲ್ಲಶೆಟ್ಟಪ್ಪ, ಹೆಬ್ಬಾಳ (ಸಾಮಾನ್ಯ)-ಅಶೋಕ ಗುರುಲಿಂಗಪ್ಪ, ಗುಂಡಗುರ್ತಿ (ಪರಿಶಿಷ್ಟ ಜಾತಿ)-ಸುನೀಲಕುಮಾರ್ ವಿಠಲ್ ದೊಡ್ಡಮನಿ, ಕೊಡದೂರ (ಸಾಮಾನ್ಯ)-ರಾಜಶೇಖರ ಗುಂಡಪ್ಪ, ಚಿತ್ತಾಪುರ (ಸಾಮಾನ್ಯ)-ಅಣ್ಣಾರಾವ ಹಣಮಂತರಾವ ಪಾಟೀಲ, ವಾಡಿ (ಸಾಮಾನ್ಯ)-ಜಾವೀದ್ ಪಟೇಲ್ ಮಹಿಬೂಬ್ ಪಟೇಲ್, ಭಂಕೂರ (ಸಾಮಾನ್ಯ)-ರಮೇಶ್ ಥಾವರು ಜಾಧವ, ಕಮರವಾಡಿ (ಪರಿಶಿಷ್ಟ ಪಂಗಡ)-ಮರೆಪ್ಪ ಸಾಯಬಣ್ಣ ಕರಿಮರ, ನಾಲವಾರ (ಸಾಮಾನ್ಯ ಮಹಿಳೆ)-ಬಸಲಿಂಗಮ್ಮ ಬಸವರಾಜ ಪಾಟೀಲ, ಅಳ್ಳೋಳ್ಳಿ (ಸಾಮಾನ್ಯ) ಭೀಮಣ್ಣ ಸಾಲಿ, ಶಹಾಬಾದ (ಸಾಮಾನ್ಯ ಮಹಿಳೆ)-ಅತ್ತರಬೇಗಂ ಅಜಮೋದ್ದಿನ್.

2 ಕ್ಷೇತ್ರಗಳಿಗೆ ಚುನಾವಣೆ:

ಭೀಮನಳ್ಳಿ (ಬಿಸಿಎ) ಕ್ಷೇತ್ರದಲ್ಲಿ ಮಲ್ಲಪ್ಪ ದುರ್ಗಪ್ಪ ವಾಡ್, ರಾಮಣ್ಣ ಕೃಷ್ಣಪ್ಪ ನಾಟೀಕಾರ, ಕರಿಗೂಳಿ ತಿಪ್ಪಣ್ಣ ವಾಡ್, ಮಹಾದೇವಪ್ಪ ಮಲ್ಲಪ್ಪ ನಾಶಿ ಹಾಗೂ ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದಲ್ಲಿ ಪ್ರಸಾದ ಚಂದ್ರಶೇಖರ ಅವಂಟಿ, ವೀರಪಾಕ್ಷಪ್ಪ ಮಲ್ಲಿಕಾರ್ಜುನಪ್ಪ ಗಡಾದ್ ಅವರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚಿನ್ನೆಗಳನ್ನು ಹಂಚಿಕೆ ಮಾಡಲಾಗಿದೆ ಜೂ.12 ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು, ಜೂ.15 ರಂದು ಚುನಾವಣೆ ನಡೆಯಲಿದ್ದು ಅಂದೆ ಫಲಿತಾಂಶ ಕೂಡ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಒಟ್ಟು ಮತದಾರರು: ಸಾಲಗಾರರ ಭೀಮನಳ್ಳಿ ಕ್ಷೇತ್ರದಲ್ಲಿ ಪುರುಷ ಮತದಾರರು 27, ಮಹಿಳಾ ಮತದಾರರು 2 ಸೇರಿದಂತೆ ಒಟ್ಟು 29 ಮತದಾರರು ಇದ್ದಾರೆ ಹಾಗೂ ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದಲ್ಲಿ ಪುರುಷ ಮತದಾರರು 92, ಮಹಿಳಾ ಮತದಾರರು 13 ಸೇರಿದಂತೆ ಒಟ್ಟು 105 ಮತದಾರರು ಇದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!